ಮನುಕುಲದ ಉದ್ಧಾರಕ ಪ್ರವಾದಿ ಮುಹಮ್ಮದ್ ಜನ್ಮದಿನ- ಈದ್-ಮಿಲಾದ್ ಆಚರಣೆ

Views: 1
ಪ್ರಪಂಚದಾದ್ಯಂತ ಮುಸ್ಲಿಮರು ಪ್ರವಾದಿ ಮುಹಮ್ಮದ್ ಅವರ ಜನ್ಮದಿನವನ್ನು ಈದ್-ಎ-ಮಿಲಾದ್ ಎಂದು ಆಚರಿಸುತ್ತಾರೆ. ಈ ದಿನವನ್ನು ನಬಿದ್, ಮೌಲಿದ್ ಅಥವಾ ಮೌಲಿದ್ ಆನ್-ನಬಿ ಎಂದೂ ಕರೆಯಲಾಗುತ್ತದೆ. ಅನೇಕ ದೇಶಗಳು ಈ ದಿನವನ್ನು ಸಾರ್ವಜನಿಕ ರಜಾದಿನವಾಗಿಯೂ ಆಚರಿಸುತ್ತವೆ. ಈ ಹಬ್ಬವನ್ನು ಭಾರತದಲ್ಲಿ ಸೆಪ್ಟೆಂಬರ್ 28 ರಂದು ಆಚರಿಸಲಾಗುತ್ತದೆ. ಹಾಗಾದರೆ ಮುಸ್ಲಿಮರಿಗೆ ಈ ದಿನ ಎಷ್ಟು ವಿಶೇಷ ಎಂದು ತಿಳಿಯೋಣ.
ಈದ್-ಎ-ಮಿಲಾದ್ ದಿನಾಂಕ ಚಂದ್ರನ ಸ್ಥಾನವನ್ನು ಅವಲಂಬಿಸಿರುತ್ತದೆ. ಈ ವರ್ಷದ ಸೆ.27ರ ಸಂಜೆಯಿಂದ ಚಂದ್ರ ನೋಡುವುರದಿಂದ ಆಚರಣೆ ಆರಂಭವಾಗಲಿದ್ದು ಸೆ.28ರ ಸಂಜೆಯವರೆಗೆ ನಡೆಯಲಿದೆ. ಈದ್ ಮಿಲಾದ್-ಉನ್-ನಬಿ ಭಾರತದಲ್ಲಿ ಸೆಪ್ಟೆಂಬರ್ 28 ರಂದು ಸಾರ್ವಜನಿಕ ರಜೆ ಎಂದು ಘೋಷಿಸಲಾಗಿದೆ.
ಈದ್- ಮಿಲಾದ್ ಇತಿಹಾಸ
ಮುಸ್ಲಿಂ ಸಮುದಾಯಕ್ಕೆ ಈ ದಿನವು ಅತ್ಯಂತ ಮಹತ್ವದ್ದಾಗಿದೆ. ಪ್ರವಾದಿ ಮುಹಮ್ಮದ್ ಇಸ್ಲಾಮಿಕ್ ಕ್ಯಾಲೆಂಡರ್‌ನ ಮೂರನೇ ತಿಂಗಳ 12 ನೇ ತಾರೀಖುನಂದು ಜನಿಸಿದರು. ಇಸ್ಲಾಮಿಕ್ ನಂಬಿಕೆಯ ಪ್ರಕಾರ, ಪ್ರವಾದಿ ಕ್ರಿಸ್ತಶಕ 517 ರಲ್ಲಿ ಕನಜಿಸಿದರು. ಈದ-ಈ-ಮಿಲಾದ್ ನ ಮೊದಲ ಹಬ್ಬವನ್ನು ಈಜಿಪ್ಟ್‌ನಲ್ಲಿ ಆಚರಿಸಲಾಯಿತು ಎಂದು ಹೇಳಲಾಗಿದೆ. 11ನೇ ಶತಮಾನದ ಆಗಮನದೊಂದಿಗೆ, ಇದನ್ನು ಪ್ರಪಂಚದಾದ್ಯಂತ ಆಚರಿಸಲು ಪ್ರಾರಂಭಿಸಿದರು.
ಪ್ರವಾದಿ ಮುಹಮ್ಮದ್ ಜನನ
ಪ್ರವಾದಿ ಮುಹಮ್ಮದ್ ಸೌದಿ ಅರೇಬಿಯಾದ ಮೆಕ್ಕಾದಲ್ಲಿ ಜನಿಸಿದರು. 540 AD ಯಲ್ಲಿ ಮೆಕ್ಕಾ ಬಳಿಯ ಹಿರಾ ಎಂಬ ಗುಹೆಯಲ್ಲಿ ಜ್ಞಾನೋದಯವನ್ನು ಪಡೆದರು ಎಂದು ಹೇಳಲಾಗುತ್ತದೆ. ಅವರು ತಮ್ಮ ಜೀವಿತಾವಧಿಯಲ್ಲಿ ಮುಹಮ್ಮದ್ ಇಸ್ಲಾಂ ಅನ್ನು ಸ್ಥಾಪಿಸಿದನು ಮತ್ತು ಸೌದಿ ಅರೇಬಿಯಾವನ್ನು ದೇವರ ಆರಾಧನೆಗೆ ಮೀಸಲಾದ ರಾಜ್ಯವಾಗಿ ಸ್ಥಾಪಿಸಿದನು. ಕ್ರಿ.ಶ. 632 ರಲ್ಲಿ ಮುಹಮ್ಮದ್ ಮರಣದ ನಂತರ, ಅನೇಕ ಮುಸ್ಲಿಮರು ಅವರ ಜೀವನ ಮತ್ತು ಬೋಧನೆಗಳನ್ನು ಸ್ಮರಿಸಲು ಹಲವಾರು ಅನಧಿಕೃತ ಹಬ್ಬಗಳನ್ನು ಆಚರಿಸಲು ಪ್ರಾರಂಭಿಸಿದರು.
ಈದ್ ಮಿಲಾದ್ ಆಚರಣೆ
ಶಿಯಾಗಳು ಮತ್ತು ಸುನ್ನಿಗಳು ಈ ದಿನವನ್ನು ವಿಭಿನ್ನ ರೀತಿಯಲ್ಲಿ ಆಚರಿಸುತ್ತಾರೆ. ಈ ದಿನದಂದು ಪ್ರವಾದಿ ಮುಹಮ್ಮದ್ ಅವರು ಶಿಯಾ ಸಂಪ್ರದಾಯದ ಪ್ರಕಾರ ಹಜರತ್ ಅಲಿಯನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿದರು. ಸುನ್ನಿ ಸಮುದಾಯಗಳು ಈ ದಿನದಂದು ಪ್ರಾರ್ಥನೆಗಾಗಿ ಸೇರಿಸುತ್ತವೆ. ಈದ್ ಮಿಲಾದ್ ಅನ್-ನಬಿ ಆಚರಣೆಯು ಈಜಿಪ್ಟ್‌ನಲ್ಲಿ ಹುಟ್ಟಿಕೊಂಡಿತು ಮತ್ತು ಅಂತಿಮವಾಗಿ ಪ್ರಪಂಚದಾದ್ಯಂತ ಹರಡಿತು.
ಮುಸ್ಲಿಮರು ಈ ದಿನವನ್ನು ವಿಶೇಷ ರೀತಿಯಲ್ಲಿ ಆಚರಿಸುತ್ತಾರೆ. ಪ್ರವಾದಿ ಮುಹಮ್ಮದ್ ಅವರ ಜನ್ಮ ಮತ್ತು ಬೋಧನೆಗಳನ್ನು ನೆನಪಿಟ್ಟುಕೊಳ್ಳಲು, ಚರ್ಚಿಸಲು ಮತ್ತು ಗೌರವಿಸಲು ಮಿಲಾದ್-ಉನ್-ನಬಿ ಸಭೆಗಳನ್ನು ನಡೆಸಲಾಗುತ್ತದೆ. ಅನೇಕ ಭಕ್ತರು ತಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಗೆ ಶುಭಾಶಯಗಳನ್ನು ಕಳುಹಿಸುತ್ತಾರೆ.
ಈದ್-ಈ-ಮಿಲಾದ್-ಉನ್-ನಬಿ ಹಬ್ಬವನ್ನು ಇಸ್ಲಾಮಿಕ್ ಕ್ಯಾಲೆಂಡರ್‌ನ ಮೂರನೇ ತಿಂಗಳಲ್ಲಿ ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಈದ್-ಈ-ಮುಲಾದ್-ಉನ್-ನಬಿಯನ್ನು ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಉಪಖಂಡದ ಇತರ ಭಾಗಗಳಲ್ಲಿ ಆಚರಿಸಲಾಗುತ್ತದೆ. ಸುನ್ನಿ ಮತ್ತು ಶಿಯಾ ಪಂಗಡಗಳು ಈದ್-ಈ-ಮಿಲಾದ್-ಉನ್-ನಬಿಯನ್ನು ವಿವಿಧ ದಿನಗಳಲ್ಲಿ ಆಚರಿಸುತ್ತಾರೆ. ತಮ್ಮ ಪಂಡಗಳಿಗೆ ಅನುಗುಣವಾಗಿ ಅವರು ಈದ್ ಮಿಲಾದ್ ಹಬ್ಬವನ್ನು ಹಮ್ಮಿಕೊಳ್ಳುತ್ತಾರೆ.
ಈದ್ ಮಿಲಾದ್ ಮಹತ್ವ
ಈದ್-ಈ-ಮಿಲಾದ್-ಉನ್-ನಬಿ ಯ ವಿಶೇಷ ದಿನದಂದು, ಅನೇಕ ಸ್ಥಳಗಳಲ್ಲಿ ಮೆರವಣಿಗೆಗಳನ್ನು ಮಾಡಲಾಗುತ್ತದೆ. ಕೆಲವು ಸ್ಥಳಗಳಲ್ಲಿ, ಮಸೀದಿಗಳಲ್ಲಿ ಪ್ರಾರ್ಥನೆಗಳನ್ನು ಮಾಡಲಾಗುತ್ತದೆ. ಈ ದಿನದಂದು ಮಸೀದಿಗಳಲ್ಲಿ ವಿಶೇಷವಾಗಿ ಅಲಂಕರಿಸಲಾಗುವುದು ಮತ್ತು ಪವಿತ್ರ ಪುಸ್ತಕ ಕುರಾನ್ ಅನ್ನು ಓದಲಾಗುತ್ತದೆ. ಅದೇ ಸಮಯದಲ್ಲಿ ಮೊಹಮ್ಮದ್ ಸಾಹೇಬರ ಸಂದೇಶಗಳು ಭಿತ್ತರಿಸಲಾಗುತ್ತದೆ.
ಈ ವಿಶೇಷ ಸಂದರ್ಭದಲ್ಲಿ, ಸಾಂಪ್ರದಾಯಿಕ ರುಚಿಕರವಾದ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಬಡವರಿಗೆ ವಿತರಿಸಲಾಗುತ್ತದೆ. ಈದ್ ಮುಲಾದ್ ದಿನ ಬಡವರಿಗೆ, ನಿರ್ಗತಿಕರಿಗೆ ದಾನ ಮಾಡುವುದರಿಂದ ಅಲ್ಲಾಹನು ಸಂತೋಷಗೊಳ್ಳುತ್ತಾನೆ. ಆ ಕುಟುಂಬದ ಮೇಲೆ ತನ್ನ ಆಶೀರ್ವಾದವನ್ನು ಕರುಣಿಸುತ್ತಾನೆ ಎನ್ನುವ ನಂಬಿಕೆ ಮುಸ್ಲಿಂ ಬಾಂದವರದ್ದು.