ಮಣೂರು: ಜಾತ್ರೆಗೆಂದು ತೆರಳಿದಾಗ ಬಾಗಿಲು ಮುರಿದು ವೃದ್ದೆಯ ಚಿನ್ನಾಭರಣ ಕದ್ದು ಪರಾರಿ

Views: 127
ಕನ್ನಡ ಕರಾವಳಿ ಸುದ್ದಿ: ಮನೆಯವರು ಜಾತ್ರೆಗೆಂದು ತೆರಳಿದಾಗ ಬಾಗಿಲು ಮುರಿದು ಒಳಪ್ರವೇಶಿಸಿದ ಕಳ್ಳನೊಬ್ಬ ವೃದ್ಧೆಯ ಜತೆ ಮನೆಯವರಂತೆ ಸಲುಗೆಯಿಂದ ಮಾತನಾಡಿ ಚಿನ್ನಾಭರಣ ಕದ್ದು ಪರಾರಿಯಾದ ಘಟನೆ ಕೋಟ ಮಣೂರಿನಲ್ಲಿ ನಡೆದಿದೆ.
ಸರಿಯಾಗಿ ಕಣ್ಣು ಕಾಣದ ವೃದ್ಧೆ ರುದ್ರಮ್ಮ(92) ಚಿನ್ನಾಭರಣ ಕಳೆದುಕೊಂಡವರು.
ಮನೆಯ ಹತ್ತಿರದ ದೇವಸ್ಥಾನದ ಜಾತ್ರೆಗೆಂದು ಮನೆಯವರು ರುದ್ರಮ್ಮ ಅವರನ್ನು ಬಿಟ್ಟು ಹೋಗಿದ್ದರು.ಪ್ರತಿದಿವಸದಂತೆ ಊಟ ಮಾಡಿ ಮಲಗುವಾಗ ತಾನು ಧರಿಸಿದ್ದ ಚಿನ್ನದ ಸರವನ್ನು ಕಳಚಿ ಮಂಚದ ಮೇಲೆ ಇಟ್ಟಿದ್ದರು. ಜಾತ್ರೆಗೆ ತೆರಳಿದ್ದ ಅಳಿಯ ಶ್ರೀಧರ್ ಮನೆಗೆ ಬಂದಾಗ ಬಾಗಿಲು ಒಡೆದಿರುವುದು ಕಂಡುಬಂದಿದೆ. ಈ ಬಗ್ಗೆ ರುದ್ರಮ್ಮರನ್ನು ವಿಚಾರಿಸಿದಾಗ, ಯಾರೋ ಒಬ್ಬ ಹುಡುಗ ಬಂದಿದ್ದ ನನಗೆ ಕಣ್ಣುಕಾಣದಿರುವುದರಿಂದ ಯಾರೆಂದು ತಿಳಿಯಲಿಲ್ಲ. ನಾನು ನೀವೇ ಬಂದಿರಬಹುದು ಎಂದು ಜಾತ್ರೆ ಮುಗಿಯಿತಾ? ಎಂದು ಆತನಲ್ಲಿ ಕೇಳಿದಾಗ ಅವನು ಮನೆಯವರಂತೆಯೇ ಮಾತನಾಡಿದ್ದೆ ಎಂದು ತಿಳಿಸಿದ್ದರು. ಆಗ ಅನುಮಾನಗೊಂಡು ಶ್ರೀಧರ್ ಹುಡುಕಿದಾಗ 30 ಗ್ರಾಂ ತೂಕದ ಚಿನ್ನದ ಸರ ಕಳವಾಗಿರುವುದು ಗಮನಕ್ಕೆ ಬಂದಿದೆ.ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ