ಮಂಡ್ಯದಿಂದ ಸ್ಪರ್ಧಿಸೋದು ನಿಖಿಲಾ. .ಹೆಚ್ಡಿಕೆನಾ.? ದೊಡ್ಡೆಗೌಡರ ಮನೆಯಲ್ಲಿ ಮಹತ್ವ ಸಭೆ

Views: 30
ಬೆಂಗಳೂರು: ಈ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸೋದು ಯಾರು ಅನ್ನೋ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲ ಕೆರಳಿಸಿದೆ. ನಿಖಿಲ್ ಕುಮಾರಸ್ವಾಮಿ ನೋ ಎಂದ ಮೇಲೆ ಜೆಡಿಎಸ್ ನಾಯಕರು ಅಲರ್ಟ್ ಆಗಿದ್ದ್ದು, ಇಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಮನೆಯಲ್ಲಿ ಮಹತ್ವದ ಸಭೆ ನಡೆಸುತ್ತಿದ್ದಾರೆ. ಪದ್ಮನಾಭನಗರದ ನಿವಾಸದಲ್ಲಿ ನಡೆಯಲಿರುವ ಈ ಸಭೆಯಲ್ಲಿ ಮಂಡ್ಯ ಜಿಲ್ಲೆಯ ಜೆಡಿಎಸ್ ನಾಯಕರು ಭಾಗಿಯಾಗುತ್ತಿದ್ದಾರೆ.
ಜೆಡಿಎಸ್ ನಾಯಕರ ಸಭೆಯಲ್ಲಿ ಪ್ರಮುಖವಾಗಿ ಮಂಡ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ. ಸಭೆಯಲ್ಲಿ ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಅವರೇ ಸ್ಪರ್ಧಿಸಲು ಮನವೊಲಿಸಲಾಗುತ್ತಿದೆ. ಒಂದು ನಿಖಿಲ್ ನಿಲ್ಲುವುದೇ ಇಲ್ಲ ಅಂದ್ರೆ ಹೆಚ್.ಡಿ. ಕುಮಾರಸ್ವಾಮಿ ಅವರು ಸ್ಪರ್ಧಿಸಲಿ. ಇಬ್ಬರಲ್ಲಿ ಒಬ್ಬರು ಮಂಡ್ಯದಿಂದ ಸ್ಪರ್ಧಿಸಬೇಕು ಅಂತ ಒತ್ತಾಯ ಮಾಡಲಾಗುತ್ತಿದೆ.
ಮತ್ತೊಮ್ಮೆ ಮಂಡ್ಯದಿಂದ ಸ್ಪರ್ಧಿಸಲು ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಲು ನಿರಾಕರಿಸುತ್ತಿರುವುದಕ್ಕೆ ಬಲವಾದ ಕಾರಣಗಳು ಇದೆ. 2019 ಹಾಗೂ 2023ರಲ್ಲಿ 2 ಸೋಲು ಕಂಡ ನಿಖಿಲ್ಗೆ ಮತ್ತೆ ಸೋಲಾದ್ರೆ ರಾಜಕೀಯ ಭವಿಷ್ಯ ಕಮರುವ ಚಿಂತೆ ಇದೆ.ಮಂಡ್ಯದಲ್ಲಿ ಕಳೆದ ಬಾರಿಯಂತೆ ನಿಖಿಲ್ ಸ್ಪರ್ಧೆಯೇ ರಾಜಕೀಯ ವಿರೋಧಿಗಳಿಗೆ ಚುನಾವಣಾ ಅಸ್ತ್ರವಾಗುವ ಸಾಧ್ಯತೆ ಇದೆ.
ನಿಖಿಲ್ ಕುಮಾರಸ್ವಾಮಿ ಅವರಿಗೆ ರಾಮನಗರ ಸೋಲಿನಿಂದ ಮತ್ತೆ ಮಂಡ್ಯಕ್ಕೆ ಬಂದ್ರು ಎಂಬ ಅಪಪ್ರಚಾರ ಭೀತಿ ಇದೆ. ಅವಕಾಶವಾದಿ ರಾಜಕಾರಣಿ ಎಂದು ಹಣೆಪಟ್ಟಿ ಕಟ್ಟುವ ಜೊತೆಗೆ ಕಳೆದ ಬಾರಿಯಂತೆ ಈ ಬಾರಿಯೂ ಸ್ವಾಭಿಮಾನದ ಕಿಚ್ಚು ಹಚ್ಚುವ ಆತಂಕ ಎದುರಾಗಿದೆ.