ಕರಾವಳಿ
ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸಲು ಯತ್ನಿಸಿದ್ದ 45.44 ಲಕ್ಷ ರೂ.ಮೌಲ್ಯದ ಚಿನ್ನ ವಶಕ್ಕೆ

Views: 25
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಅಕ್ರಮವಾಗಿ ಸಾಗಿಸಲು ಯತ್ನಿಸಿದ್ದ 45,44,600 ರೂಪಾಯಿ ಮೌಲ್ಯದ 733 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಇಮಿಗ್ರೇಷನ್ ಆಗಮನದ ಪ್ರದೇಶದಲ್ಲಿನ ವಾಶ್‌ರೂಮ್‌ನ ಡ್ರೈನೇಜ್ ಚೇಂಬರ್‌ನಲ್ಲಿ ಕಪ್ಪು ಬಣ್ಣದ ಚೀಲದೊಳಗೆ ಬಚ್ಚಿಟ್ಟಿದ್ದ ಪೇಸ್ಟ್ ರೂಪದಲ್ಲಿರುವ (ಚಿನ್ನ) ವಸ್ತು ಕಂಡುಬಂದಿದ್ದು, ವಿಮಾನ ನಿಲ್ದಾಣ ಅಧಿಕಾರಿಗಳ ಗಮನಕ್ಕೆ ಬಂದಿದೆ. ಟಾಯ್ಲೆಟ್ ನಲ್ಲಿ ಚಿನ್ನವಿಟ್ಟ ವ್ಯಕ್ತಿ ಇನ್ನು ಪತ್ತೆಯಾಗಿಲ್ಲ ಎಂದು ತಿಳಿದಿದ್ದು, ಕಸ್ಟಮ್ಸ್ ಅಧಿಕಾರಿಗಳು ಕಳ್ಳಸಾಗಣೆ ಮಾಡಿದ ಚಿನ್ನದ ಮೂಲ ಮತ್ತು ವ್ಯಕ್ತಿಯನ್ನು ಪತ್ತೆಹಚ್ಚಲು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.