ಮಂಗಳೂರು :ಮಾ.16,17 ರವರೆಗೆ ಬೋಳೂರು ಶ್ರೀವೀರಭದ್ರ ಮಹಮ್ಮಾಯಿ ದೇವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವ

Views: 121
ಮಂಗಳೂರು: ಬೋಳೂರು ಶ್ರೀ ವೀರಭದ್ರ ಮಹಾಮ್ಮಾಯಿ ದೇವಸ್ಥಾನದಲ್ಲಿ ವರ್ಷಪ್ರತಿಯಂತೆ ದಿನಾಂಕ 16.3.2024 ಮತ್ತು 17.3.2024ರಂದು ವಾರ್ಷಿಕ ಜಾತ್ರಾ ಮಹೋತ್ಸವ ಜರಗಲಿದೆ ದಿನಾಂಕ 17.3.2024ರ ರವಿವಾರ ಚಂಡಿಕಾ ಯಾಗ ನಡೆಯಲಿದೆ.
ಭಗವದ್ಭಕ್ತರೆ;
ಬ್ರಹ್ಮಶ್ರೀ ವೇದಮೂರ್ತಿ ದೇರೆಬೈಲು ವಿಠ್ಠಲ ದಾಸ್ ತಂತ್ರಿವರೇಣ್ಯರ ನೇತೃತ್ವದಲ್ಲಿ ಜರಗಲಿದ್ದು
16.3.2024ನೇ ಶನಿವಾರ ಸಾಯಂಕಾಲ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಭಂಡಾರ ಮನೆಯಿಂದ ಪರಿವಾರ ದೈವ ದೇವರ ಭಂಡಾರ ಶ್ರೀ ಕ್ಷೇತ್ರಕ್ಕೆ ಆಗಮಿಸುವುದು,ನಂತರ ವಾಸ್ತು ಹೋಮ, ಬಲಿ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
17.3.2024ನೇ ರವಿವಾರ ರುದ್ರಾಭಿಷೇಕ, ಗಣ ಹೋಮ, ಪ್ರಧಾನ ಹೋಮ, ಕಳಶಾಭಿಷೇಕ, ಚಂಡಿಕಾ ಹೋಮ, ಮಹಾಪೂಜೆ, ವಿಶೇಷ ಹೂವಿನ ಪೂಜೆ, ಪ್ರಸಾದ ವಿತರಣೆ, ಶ್ರೀ ಮಹಮ್ಮಾಯಿ ದೇವರಿಗೆ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಸಾಯಂಕಾಲ ರಂಗ ಪೂಜೆ, ಬಲಿ ಉತ್ಸವ,ಪಲ್ಲಕಿ ಪೂಜೆ, ಕಟ್ಟೆ ಪೂಜೆ, ಓಕುಳಿ, ಬಡಗು ಪೇಟೆ ಸವಾರಿ, ಅವಭ್ರತಸ್ನಾನ, ದೈವ ದೇವರ ಭೇಟಿ, ಜಲಕದಬಲಿ, ಶ್ರೀ ಮಹಮ್ಮಾಯಿ ದೇವರಿಗೆ ಮಹಾಪೂಜೆ, ಭಂಡಾರ ನಿರ್ಗಮನದೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಳಲಿದೆ.
ಸರ್ವರಿಗೂ ಸ್ವಾಗತ ಕೋರುವ,
————– ಬಿ ಎನ್ ಹರೀಶ್ ಬೋಳೂರು
ದೇವಸ್ಥಾನದ ವಿಳಾಸ/ಸಂಪರ್ಕ/ ಬ್ಯಾಂಕ್ ವಿವರ
ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನ. ವೀರಭದ್ರ ನಗರ, ಮಠದಕಣಿ ರಸ್ತೆ ,ಬೋಳೂರು, ಮಂಗಳೂರು -575006
ದೂರವಾಣಿ 0824- 2457550
Mob 9449450190/ 9886427736 7899562045
Email: Mangaloreveerabhadra temple @ gmail.com
Account name :Shri veerabhadra Mahamayee temple
Bank name: canara Bank Gandhinagara Mangalore
Account number: 0631101011488
IFSC CNRB0000631