ಕರಾವಳಿ
ಮಂಗಳೂರು:ವೃದ್ಧ ಮಾವನಿಗೆ ಸೊಸೆ ಮನಸೋ ಇಚ್ಛೆ ಥಳಿತ.!

Views: 173
ಮಂಗಳೂರು: ಸೊಸೆಯೊಬ್ಬರು ಮಾವನಿಗೆ ಮನಸೋ ಇಚ್ಛೆ ಥಳಿಸಿರೋ ಘಟನೆ ಬೆಳಕಿಗೆ ಬಂದಿದೆ. ವೃದ್ಧ ಮಾವನಿಗೆ ಸೊಸೆ ಮನಸೋ ಇಚ್ಛೆ ಥಳಿಸಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮನೆಯಲ್ಲಿರುವ ಮಾವನಿಗೆ ಸೊಸೆ ವಾಕಿಂಗ್ ಸ್ಟಿಕ್‌ನಲ್ಲೇ ಹಿಗ್ಗಾಮುಗ್ಗ ಥಳಿಸಿದ್ದಾರೆ. ಸೊಸೆ ಉಮಾಶಂಕರಿ ಅವರು ಮಂಗಳೂರಿನ ಅತ್ತಾವರದ ಕೆಇಬಿಯಲ್ಲಿ ಅಧಿಕಾರಿಯಾಗಿದ್ದಾರೆ.
ಮಂಗಳೂರಿನ ಕುಲಶೇಖರದಲ್ಲಿ ಈ ಘಟನೆ ನಡೆದಿದೆ. ವೃದ್ಧನ ಮಗ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. 76 ವರ್ಷದ ವೃದ್ಧ ಮಾವನ ಜೊತೆ ಸೊಸೆ ಇದ್ದರು. ವಿದೇಶದಲ್ಲಿದ್ದ ಮಗ ಮನೆಗೆ ಬಂದು ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ ಸೊಸೆ ಥಳಿಸಿರುವ ಘಟನೆ ಬೆಳಕಿಗೆ ಬಂದಿದೆ. ಗಾಯಾಳು ಮಾವ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.