ಕರಾವಳಿ

ಮಂಗಳೂರಿನಲ್ಲಿ ಹಸುರು ಹೈಡ್ರೋಜನ್‌ ಘಟಕ?- ಹಲವು ಕಂಪೆನಿಗಳಿಗೆ ಹಸುರು ನಿಶಾನೆ ನೀಡಿದ ಸರ್ಕಾರ |ಸರ್ವೇ ಆರಂಭ

Views: 0

ಮಂಗಳೂರು: “ಭವಿಷ್ಯದ ಇಂಧನ’ ಎಂಬ ಹೆಗ್ಗಳಿಕೆ ಹೊಂದಿರುವ “ಗ್ರೀನ್‌ ಹೈಡ್ರೋಜನ್‌’ ಉತ್ಪಾದನ ಘಟಕವನ್ನು ನವ ಮಂಗಳೂರು ಬಂದರು (ಎನ್‌ಎಂಪಿಎ) ಸಮೀಪದಲ್ಲಿ ನಿರ್ಮಿಸಲು ಒಲವು ತೋರಿರುವ ಕೆಲವು ಕಂಪೆನಿಗಳಿಗೆ ರಾಜ್ಯ ಸರಕಾರವು ಹಸುರು ನಿಶಾನೆ ತೋರಿದ್ದು, ಸರ್ವೇ ಆರಂಭಿಸಲಾಗಿದೆ.

ಪಣಂಬೂರಿನ ನವ ಮಂಗಳೂರು ಬಂದರು ಸಮೀಪದಲ್ಲೇ ಇರುವ ವಿಶೇಷ ಆರ್ಥಿಕ ವಲಯ (ಎಸ್‌ಇಝಡ್‌)ದ ಸುಮಾರು 100 ಎಕರೆಗಿಂತಲೂ ಅಧಿಕ ಜಾಗದಲ್ಲಿ ಪ್ರಸ್ತಾವಿತ ಹಸುರು ಹೈಡ್ರೋಜನ್‌ ಘಟಕ ಅಥವಾ ದಾಸ್ತಾನು ಕೇಂದ್ರ ನಿರ್ಮಾಣಕ್ಕೆ ಅವಕಾಶ ಸಿಗುವ ಸಾಧ್ಯತೆ ಇದೆ.

ಮಂಗಳೂರಿನಲ್ಲಿ. ಹಸುರು ಹೈಡ್ರೋಜನ್‌ ಘಟಕ ಆಯ್ಕೆ ಯಾಕೆ?

ಮಂಗಳೂರಿನಲ್ಲಿ ಅರಬಿ ಸಮುದ್ರದ ನೀರು ಲಭ್ಯವಿದ್ದು, ಕಡಲ ತೀರದಲ್ಲಿಯೇ ಘಟಕ ನಿರ್ಮಾಣ ಮಾಡಲು ಅವಕಾಶವಿದೆ. ಜತೆಗೆ ಶೇಖರಣೆಗೆ ಅಗತ್ಯವಿರುವ ಜಾಗ ಸಮೀಪ ದಲ್ಲೇ ಇರುವ ವಿಶೇಷ ಆರ್ಥಿಕ ವಲಯದಲ್ಲಿ ಲಭ್ಯವಾದರೆ ಅನುಕೂಲವಾಗುತ್ತದೆ. ನವಮಂಗಳೂರು ಬಂದರಿನಿಂದ ವಿದೇಶಗಳಿಗೆ ರಫ್ತು ಸುಲಭಸಾಧ್ಯ.

ಗ್ರೀನ್‌ ಹೈಡ್ರೋಜನ್‌ಉತ್ಪಾದನ ಘಟಕವನ್ನು ಮಂಗಳೂರಿನಲ್ಲಿ ಆರಂಭಿಸಲು ಕೆಲವು ಕಂಪೆನಿಯವರು ಈಗಾಗಲೇ ಸರ್ವೇ ನಡೆಸಿದ್ದಾರೆ. ರಫ್ತು ಮಾಡಲು ಸುಲಭ ವಾಗುವಂತೆ ನವಮಂಗಳೂರು ಬಂದರು ಸಮೀಪದ ಎಸ್‌ಇಝಡ್‌ ನಲ್ಲಿಯೇ ಜಾಗ ಪರಿಶೀಲಿಸಿದ್ದಾರೆ.

ಏಳು ಕಂಪನಿಗಳು ಹೂಡಿಕೆಗೆ ಆಸಕ್ತಿ ತೋರಿದೆ. ಈ ಪೈಕಿ ನಾಲ್ಕು ಕಂಪನಿಗಳ ತಜ್ಞರ ತಂಡಗಳು ಈಗಾಗಲೇ ಮಂಗಳೂರಿಗೆ ಆಗಮಿಸಿ ಪರಾಮರ್ಶೆ ನಡೆಸಿವೆ. ವರದಿ ಆಧಾರದಲ್ಲಿ ಹೂಡಿಕೆಯ ನಿರ್ಧಾರ ಕೈಗೊಳ್ಳುವ ನೀರಿಕ್ಷೆ ಇದೆ.

ಇದಕ್ಕೆ ಸಾವಿರಾರು ಕೋಟಿ ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ ಈ ಪೈಕಿ ನಾಲ್ಕು ಕಂಪನಿಗಳಿಗೆ ಕೈಗಾರಿಕಾ ಹಾಗೂ ವಾಣಿಜ್ಯ ಇಲಾಖೆಯಿಂದ ರಚಿಸಿರುವ ಉನ್ನತ ಮಟ್ಟದ ಸಮಿತಿಯಿಂದ ಅನುಮತಿ ದೊರೆತಿದೆ ಇದು ಸಾಕಾರವಾದರೆ ಮಂಗಳೂರು ವ್ಯಾಪ್ತಿಯ ಆರ್ಥಿಕ ಕ್ಷೇತ್ರದಲ್ಲಿ ಹೊಸ ಸಂಚಲನ ಉಂಟಾಗಲಿದ್ದು ಉದ್ಯೋಗ ಸೃಷ್ಟಿಯ ಸಾಧ್ಯತೆಗಳಿವೆ.

ಕೇಂದ್ರ ಸರ್ಕಾರವು ನೂತನ ರಾಷ್ಟ್ರೀಯ ಹೈಡ್ರೋಜನ್ ನೀತಿಯನ್ನು 2022ರ ಫೆಬ್ರವರಿ 17ರಂದು ಜಾರಿಗೊಳಿಸಿದೆ ಸಾಂಪ್ರದಾಯಿಕ ಪಳೆಯುಳಿಕೆ ಮೂಲದ ಇಂಧನಗಳ ಅವಲಂಬನೆ ತಗ್ಗಿಸಲು ಗ್ರೀನ್ ಹೈಡ್ರೋಜನ್ ಮೂಲದ ಇಂಧನ ಬಳಕೆಯನ್ನು ಪ್ರೋತ್ಸಾಹಿಸಲಾಗುತ್ತಿದೆ ಗ್ರೀನ್ ಹೈಡ್ರೋಜನ್ ಯೋಜನೆಯ 2025 ರ ಜೂನ್ 30ರ ಒಳಗೆ ದೇಶದಲ್ಲಿ ಪೂರ್ಣ ಪ್ರಮಾಣದಲ್ಲಿ ಆರಂಭಿಸಲು ಕೇಂದ್ರ ಸರಕಾರ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಹೊಸ ಘಟಕ ಯೋಜನೆ, ಮಂಗಳೂರಿನಲ್ಲಿ ಶೀಘ್ರ ಅನುಷ್ಠಾನವಾಗುವ ನೀರಿಕ್ಷೆ ಇದೆ.

 

Related Articles

Back to top button