ಮಂಗಳೂರಲ್ಲಿ ಅದ್ದೂರಿಯಾಗಿ ನಡೆದ‘ರಾಮ-ಲಕ್ಷ್ಮಣ’ ಜೋಡುಕರೆ ಕಂಬಳ

Views: 14
ಮಂಗಳೂರು:ನಗರದ ಬಂಗ್ರ ಕೂಳೂರಿನ ಗೋಲ್ಡ್‌ಫಿಂಚ್ ಸಿಟಿಯಲ್ಲಿ ಸಿದ್ಧಡಿಸಲಾಗಿರುವ ಕಂಬಳ ಕರೆಯಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ ನೇತೃತ್ವದ 7 ನೇ ವರ್ಷದ ‘ರಾಮ-ಲಕ್ಷ್ಮಣ’ ಜೋಡುಕರೆ ಕಂಬಳ ಅದ್ದೂರಿಯಾಗಿ ನಡೆಯಿತು.
ಈ ಬಾರಿ ಸುಮಾರು 170 ಜೊತೆ ಕೋಣಗಳು ಮಂಗಳೂರು ಕಂಬಳದಲ್ಲಿ ಪಾಲ್ಗೊಂಡಿವೆ. ಮಂಗಳೂರು ಕಂಬಳ ಸ್ಪರ್ಧೆ ಯಲ್ಲಿ ನೇಗಿಲು ಹಿರಿಯ, ಕಿರಿಯ, ಹಗ್ಗ ಹಿರಿಯ ಹಾಗೂ ಕಿರಿಯ, ಕನಹಲಕೆ, ಅಡ್ಡಹಲಗೆ ಎಂಬ ಆರು ವಿಭಾಗಗಳಲ್ಲಿ ಸ್ಪರ್ಧೆ ನಡೆದಿದ್ದು ನಗರ ಭಾಗದ ಕಂಬಳ ಪ್ರಿಯರಿಗೆ ರಸದೌತಣ ನೀಡಿದೆ. ಈ ಹಿಂದೆ ಪೇಟಾದವರು ಕಂಬಳ ಕ್ರೀಡೆಯಲ್ಲಿ ಪ್ರಾಣಿ ಹಿಂಸೆ ನಡೆಯುತ್ತಿದೆ. ಎಂದು ಕಂಬಳ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ರು. ಆನಂತರ ಸುಪ್ರೀಂಕೋರ್ಟ್ ಆದೇಶದಿಂದ ಕಂಬಳ ನಿಂತೇ ಹೋಯ್ತು ಎನ್ನಲಾಗಿತ್ತು. ಇಂಥ ಸಂದರ್ಭದಲ್ಲಿ ಕರಾವಳಿಯ ಅಷ್ಟೂ ಮಂದಿ ಜೊತೆಯಾಗಿ ನಿಂತು ಕೋರ್ಟ್ ಮೆಟ್ಟಿಲೇರಿದ್ರು. ಅತ್ತ 2016ರಲ್ಲಿ ಕಂಬಳಕ್ಕೆ ರಾಜ್ಯ ಸರ್ಕಾರದ ಅಂಕಿತ ಬೀಳುತ್ತಿದ್ದಂತೆ, ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದು ಬಂದಿದ್ದ ಕ್ಯಾಪ್ಟನ್ ಬೃಜೇಶ್ ಚೌಟ ನೇತೃತ್ವದಲ್ಲಿ ಮಂಗಳೂರಿನಲ್ಲಿ ಕಂಬಳ ನಡೆಯಿತು.
ಇದೀಗ 7ನೇ ವರ್ಷದ ಕಂಬಳ ನಡೆಯುತ್ತಿದೆ. ನಗರ ಪ್ರದೇಶದಲ್ಲಿ ನಡೆಯುವ ಈ ಮಂಗಳೂರು ಕಂಬಳ ಜಾಗತಿಕ ಮಟ್ಟದಲ್ಲಿ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ. ತುಳುವರ ಜನಪದ ಉತ್ಸವ ಆಗಿ ಮೂಡಿಬರುತ್ತಿರುವ ಈ ಕಂಬಳ ಕ್ರೀಡೆ ವೀಕ್ಷಿಸಲು ದೂರದ ಊರುಗಳಿಂದಲೂ ಬಂದ ಪ್ರವಾಸಿಗರು ತುಳುನಾಡಿನ ಸಂಸ್ಕೃತಿ ವೈಭವ ಕಣ್ತುಂಬಿ ಕೊಂಡಿದ್ದಾರೆ. ಮಂಗಳೂರು ಕಂಬಳದಲ್ಲಿ 6 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯುತ್ತಿವೆ. ಇಂದು ಮಧ್ಯಾಹ್ನದವರೆಗೂ ಕಂಬಳ ಕ್ರೀಡೆ ನಡೆಯಲಿದೆ. ಬಳಿಕ ಗೆದ್ದ ಕೋಣಗಳಿಗೆ ಪ್ರಶಸ್ತಿ ಪುರಸ್ಕಾರ ನಡೆಯಲಿದೆ. ಒಟ್ಟಾರೆ, ತುಳುನಾಡಿನ ದಕ್ಷಿಣದಿಂದ ಉತ್ತರದ ಬೈಂದೂರಿನವರೆಗೂ ಕಂಬಳ ಕೋಣಗಳು ರಾಮಲಕ್ಷ್ಮಣ ಕರೆಗೆ ಇಳಿದಿವೆ. ಗೆಲುವಿನ ನಾಗಾಲೋಟ ಬೀರಿ ಕರೆಯಲ್ಲಿ ಕಂಬಳದ ಕಂಪು ಚೆಲ್ಲಿವೆ.