ಬ್ರಹ್ಮಾವರ: ಹೊಳೆಗೆ ಗಾಳ ಹಾಕುವುದಾಗಿ ಮನೆಯಿಂದ ಹೋದ ಯುವಕ ನಾಪತ್ತೆ!

Views: 117
ಕನ್ನಡ ಕರಾವಳಿ ಸುದ್ದಿ: ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪ ಯುವಕನೊಬ್ಬ ಹೊಳೆಯಲ್ಲಿ ಮೀನಿಗೆ ಗಾಳ ಹಾಕುವುದಾಗಿ ಮನೆಯಿಂದ ಹೋದವ ಬಾರದೆ ನಾಪತ್ತೆಯಾದ ಘಟನೆ ಸಂಭವಿಸಿದೆ.
ನಾಪತ್ತೆಯಾದ ಯುವಕ ನಾಲ್ಕೂರು ನಿವಾಸಿ ಕೃಷ್ಣ ಎಂಬವರ ಮಗ ಗಣೇಶ (24) ಎಂದು ತಿಳಿಯಲಾಗಿದೆ.
ಬಸ್ಸಿನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡಿಕೊಂಡಿದ್ದು, ಮೀನಿಗೆ ಗಾಳ ಹಾಕಲು ಕೊಕ್ಕರ್ಣೆ ಬ್ರಿಡ್ಜ್ ಬಳಿ ಇರುವ ಮೋಗವೀರ ಪೇಟೆ ದೇವಸ್ಥಾನ ಹತ್ತಿರದಲ್ಲಿ ಮೀನು ಗಾಳಕ್ಕೆ ಬಂದಿದ್ದು, ಗಣೇಶನು ಗಾಳಕ್ಕೆ ಕೊಕ್ಕರ್ಣೆ ಪೇಟೆಗೆ ಹೋಗಿ ಕೋಳಿ ಕರಳನ್ನು ತರುವುದಾಗಿ ಹೇಳಿ ಕೊಕ್ಕರ್ಣೆ ಪೇಟೆಗೆ ತೆರಳಿ ಕೋಳಿ ಕರಳನ್ನು ಸೂರ್ಯ ಮತ್ತು ಸುದೀಪನಿಗೆ ಕೊಟ್ಟು ತಾನು ಮುಂದೆ ಹೋಗಿ ಗಾಳ ಹಾಕುವುದಾಗಿ ಹೇಳಿ ಅಲ್ಲಿಂದ ಸುದೀಪನ ಬೈಕ್ ತೆಗೆದುಕೊಂಡು ಹೋಗಿರುತ್ತಾನೆ ಬಳಿಕ ಸುಮಾರು ಸಮಯದ ನಂತರ ಗಣೇಶನಿಗೆ ಕರೆ ಮಾಡಿದಾಗ ಆತನ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಆತನು ಹೋಗುವ ದಾರಿಯಲ್ಲಿ ಹುಡುಕುತ್ತಾ ಹೋದಾಗ 1 ಕಿ.ಲೋ ಮೀಟರ್ ದೂರದಲ್ಲಿ ಸುದೀಪನ ಬೈಕ್ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದು ಅಲ್ಲಿ ಸುತ್ತಮುತ್ತ ಹುಡುಕಾಡಿದಾಗ ಗಣೇಶನು ಗಾಳಕ್ಕೆ ತೆಗೆದುಕೊಂಡು ಹೋದ ನೂಲು ಮತ್ತು ಕೋಳಿ ಕರಳು ಅಲ್ಲಿನ ಬಂಡೆಯ ಮೇಲೆ ಇರುತ್ತದೆ ಆತನನ್ನು ಎಲ್ಲ ಕಡೆ ಹುಡುಕಾಡಿದ್ದಲ್ಲಿ ಸಿಕ್ಕಿರುವುದಿಲ್ಲ ಎಂದು ತಿಳಿಸಿರುತ್ತಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.