ಬೈಕಾಡಿ ನವಗ್ರಹ ಫ್ರೆಂಡ್ಸ್ (ರಿ), ಜಿಲ್ಲಾ ಆಸ್ಪತ್ರೆ ರಕ್ತ ನಿಧಿ ಕೇಂದ್ರ ಉಡುಪಿ ಆಶ್ರಯದಲ್ಲಿ ರಕ್ತದಾನ ಶಿಬಿರ

Views: 53
ಬ್ರಹ್ಮಾವರ: ನವಗ್ರಹ ಫ್ರೆಂಡ್ಸ್ (ರಿ) ಗಾಂಧಿನಗರ ಬೈಕಾಡಿ ಮತ್ತು ಜಿಲ್ಲಾ ಆಸ್ಪತ್ರೆ ರಕ್ತನಿಧಿ ಕೇಂದ್ರ ಉಡುಪಿ ಇವರ ಆಶ್ರಯದಲ್ಲಿ ಬೈಕಾಡಿ ಗಾಂಧಿನಗರ ಅಂಬೇಡ್ಕರ್ ಭವನದಲ್ಲಿ ಮಾರ್ಚ್ 24ರಂದು ರಕ್ತದಾನ ಶಿಬಿರ ನಡೆಯಿತು.
ಮುಖ್ಯ ವೈದ್ಯಾಧಿಕಾರಿಗಳು ರಕ್ತ ನಿಧಿ ಆಸ್ಪತ್ರೆ ಉಡುಪಿ ಡಾ.ವೀಣಾ ಕುಮಾರಿ ಇವರು ರಕ್ತದಾನದ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ಅತಿಥಿಗಳಾಗಿ ರವಿ ನಾಯಕ್ ಗಾಂಧಿನಗರ ಬೈಕಾಡಿ, ಅಶೋಕ್ ಶೆಟ್ಟಿಗಾರ ಪಡು ಬೈಕಾಡಿ ಗಾಂಧಿನಗರ,ಗಾಯತ್ರಿ ಟೀಚರ್ ಗಾಂಧಿನಗರ ಬೈಕಾಡಿ, ಮಂಜುನಾಥೇಶ್ವರ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘ (ರಿ) ಗಾಂಧಿನಗರ ಬೈಕಾಡಿ, ದಿನೇಶ್ ಆಚಾರ್ಯ, ಕಾರ್ತಿಕ್ ಸುವರ್ಣ ಅಧ್ಯಕ್ಷರು ನವಗ್ರಹ ಫ್ರೆಂಡ್ಸ್ ಗಾಂಧಿನಗರ ಬೈಕಾಡಿ, ಮೋಹನದಾಸ ಶೆಟ್ಟಿಗಾರ ಅಧ್ಯಕ್ಷರು ಶ್ರೀರಾಮ ಮಿತ್ರಕೂಟ ಭಜನಾ ಮಂದಿರ ಗಾಂಧಿನಗರ ಉಪಸ್ಥಿತರಿದ್ದರು.
ಈ ಶಿಬಿರದಲ್ಲಿ 55ಕ್ಕಿಂತ ಹೆಚ್ಚಿನ ಜನರು ರಕ್ತದಾನ ಮಾಡಿ ಸಹಕರಿಸಿದ್ದಾರೆ.
ಮನ್ವಿತ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾರ್ತಿಕ್ ಸುವರ್ಣ ಧನ್ಯವಾದ ಅರ್ಪಿಸಿದರು.