ಬೈಂದೂರು ಪರಿಸರದಲ್ಲಿ ನಕ್ಸಲ್ ಚಟುವಟಿಕೆ ನಾಗರಿಕರಲ್ಲಿ ಆತಂಕ

Views: 70
ಉಡುಪಿ ಜಿಲ್ಲೆಯಲ್ಲಿ ಕೆಲವು ವರ್ಷಗಳಿಂದ ತಣ್ಣಗಾಗಿದ್ದ ನಕ್ಸಲ್ ಚಟುವಟಿಕೆ ಮತ್ತೆ ಬೈಂದೂರು ತಾಲೂಕಿನ ಪರಿಸರದಲ್ಲಿ ಕಾಣಿಸಿಕೊಂಡಿದ್ದು, ನಾಗರಿಕರಲ್ಲಿ ಆತಂಕ ಹೆಚ್ಚಾಗಿದೆ.
ಬೈಂದೂರು ತಾಲೂಕಿನ ಮುದೂರು, ಜಡ್ಕಲ್, ಬೆಳ್ಕಲ್ ಪರಿಸರದಲ್ಲಿ ಅಲ್ಲಲ್ಲಿ ಚಟುವಟಿಕೆ ಕಾಣಿಸಿಕೊಂಡಿದೆ.
ಕಳೆದ ಎರಡು ವರ್ಷಗಳಿಂದ ಇಲ್ಲಿ ನಕ್ಸಲ್ ಚಟುವಟಿಕೆ ನಡೆಯುತ್ತಿರುವ ಅಭಿಮಾನಿ ಇದ್ದು ಹಸಿರು ಯುನಿಫಾರ್ಮ್ ಹಾಕಿದ ನಾಲ್ವರ ತಂಡ ವಿವಿಧ ಮನೆಗಳಿಗೆ ಭೇಟಿ ನೀಡಿದೆ ಎಂದು ಗ್ರಾಮಸ್ಥರಿಂದ ತಿಳಿಯಲಾಗಿದೆ.
ನಾಲ್ವರ ಪೈಕಿ ಇಬ್ಬರಲ್ಲಿ ಶಸ್ತ್ರಾಸ್ತ್ರಗಳಿದ್ದು ಕೆಲವು ಮನೆ ಮನೆಗಳಿಗೆ ಬೇಟಿ ನೀಡಿದ್ದರು,ಇನ್ನು ಕೆಲವು ಮನೆಯುವರು ಭೇಟಿಗೆ ಅವಕಾಶ ನೀಡಲಿಲ್ಲ ಕೆಲವರನ್ನು ಮನೆಯಲ್ಲಿಯೇ ಕಿಟಕಿಯಲ್ಲಿ ಮಾತನಾಡಿಸಿ ಹೋಗಿದ್ದಾರೆ.
ಹಾಗೆಯೇ ಉದಯ ನಗರ ಬಳಿ ಸಂಚರಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಕೇರಳದಲ್ಲಿ ನಕ್ಸಲ್ ಚಟುವಟಿಕೆ ಪೊಲೀಸರಿಂದ ತೀವ್ರ ಕಾರ್ಯಾಚರಣೆ ಮೂಲಕ ಒತ್ತಡ ಬಂದ ಹಿನ್ನೆಲೆಯಲ್ಲಿ ನಕ್ಷಲರು ಈ ಭಾಗದಲ್ಲಿ ತಮ್ಮ ಕಾರ್ಯ ಚಟುವಟಿಕೆ ಆರಂಭಿಸಿರುವ ಅನುಮಾನ ದಟ್ಟವಾಗಿದೆ ಎಂದು ಮಾಹಿತಿ ತಿಳಿಯಲಾಗಿದೆ.ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕಿದ್ದಾರೆ.