ಜನಮನ
ಬೀದರ್ನಲ್ಲಿ ಕೆಮಿಕಲ್ ಗ್ಯಾಸ್ ಸೋರಿಕೆಯಾಗಿ ಇಬ್ಬರು ಸಾವು

Views: 20
ಬೀದರ್: ಕೆಮಿಕಲ್ ಗ್ಯಾಸ್ ಸೋರಿಕೆಯಾಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹುಮನಾಬಾದ್ ಪಟ್ಟಣದ ಹೊರವಲಯದ ಶ್ರೀಪ್ರಸನ್ನ ಪ್ರೀ ಪ್ರೋಸೆಸಿಂಗ್ ಲಿಮಿಟೆಡ್ ಕಂಪನಿಯಲ್ಲಿ ನಡೆದಿದೆ.
ತಾಲೂಕಿನ ವಡ್ಡನಕೇರಾ ಗ್ರಾಮದ ಮಹ್ಮದ್ ಶಾಬಾದ್ (21), ಮಧ್ಯಪ್ರದೇಶ ಮೂಲದ ಇಂದ್ರಜಿತ್ ಮೃತಪಟ್ಟ ವ್ಯಕ್ತಿಗಳು. ಇವರು ಕೈಗಾರಿಕಾ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಕೆಮಿಕಲ್ ಗ್ಯಾಸ್ ಸೋರಿಕೆಯಾಗಿದೆ. ಇದನ್ನು ಅರಿವಿಲ್ಲದೇ ಸೇವನೆ ಮಾಡಿದ್ದರಿಂದ ಸಾವನ್ನಪ್ಪಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಆಸ್ಪತ್ರೆ ಬಳಿ ನೂರಾರು ಜನರು ಜಮಾವಣೆಗೊಂಡು ಗಲಾಟೆ ಮಾಡುತ್ತಿದ್ದರು. ಆದರೆ ಪೊಲೀಸರ ಮಧ್ಯೆ ಪ್ರವೇಶದಿಂದ ಪರಿಸ್ಥಿತಿ ತಿಳಿಗೊಳಿಸಲಾಯಿತು. ಸ್ಥಳಕ್ಕೆ ಶಾಸಕ ಸಿದ್ದು ಪಾಟೀಲ್, ಡಿಸಿ ಗೋವಿಂದ್ ರೆಡ್ಡಿ, ಎಸ್ಪಿ ಚನ್ನಬಸವಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.