ರಾಜಕೀಯ

ಬಿಜೆಪಿ ಟಿಕೆಟ್ ಪ್ರಕಟ ಬೆನ್ನಲ್ಲೇ ಅಸಮಾಧಾನ ಸ್ಫೋಟ, ಟಿಕೆಟ್ ವಂಚಿತ ಬೆಂಬಲಿಗರಿಂದ ಪ್ರತಿಭಟನೆ

Views: 46

ಬಿಜೆಪಿಯ ಎರಡನೇ ಪಟ್ಟಿ​ ಬಿಡುಗಡೆ ಆಗಿದ್ದು, ಕರ್ನಾಟಕದ 20 ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿ ಯಾರು ಎಂಬುದು ಘೋಷಣೆಯಾಗಿದೆ. ಆದರೆ, ಟಿಕೆಟ್ ಕೈ ತಪ್ಪಿಸಿಕೊಂಡವರು, ಟಿಕೆಟ್ ಮೇಲೆ ಕಣ್ಣಿಟ್ಟು ಎಲ್ಲ ರೀತಿಯಲ್ಲಿ ಸಜ್ಜಾಗಿದ್ದವರು ಅಸಮಾಧಾನಗೊಂಡಿದ್ದಾರೆ. ಬಂಡಾಯದ ಕಹಳೆ ಊದಿದ್ದಾರೆ. ಎಲ್ಲೆಲ್ಲಿ ಯಾರೆಲ್ಲ ಬಂಡಾಯವೆದ್ದಿದ್ದಾರೆ ಎಂಬುದು ಇಲ್ಲಿದೆ.

ಇನ್ನುಳಿದ ಅಭ್ಯರ್ಥಿಗಳನ್ನು ಪ್ರಕಟಿಸಿದ ನಂತರ ಇನ್ನಷ್ಟು ಅಸಮಾಧಾನ ಭುಗಿಲೇಳುವ ಸಾಧ್ಯತೆಯನ್ನು ಕಾದು ನೋಡಬೇಕಾಗಿದೆ.

ಶಿವಮೊಗ್ಗ, ದಾವಣಗೆರೆ, ಕೊಪ್ಪಳ, ಬೆಳಗಾವಿ ಸಹಿತ ಹಲವೆಡೆ ಟಿಕೆಟ್ ವಂಚಿತರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ.

ಶಿವಮೊಗ್ಗದಿಂದ ಈಶ್ವರಪ್ಪ ಪುತ್ರ ಕಾಂತೇಶ್ ಅವರಿಗೆ ಟಿಕೆಟ್ ನಿರಾಕರಣೆಯಾಗಿದ್ದರಿಂದ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಅವರು ಯಡಿಯೂರಪ್ಪ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಾವಣಗೆರೆ ಸಹಿತ ಹಲವು ಕ್ಷೇತ್ರಗಳಲ್ಲಿ ಘೋಷಿತ ಅಭ್ಯರ್ಥಿಗಳ ವಿರುದ್ಧವೇ ‘ಗೋ ಬ್ಯಾಕ್ ಅಭಿಯಾನ’ ಆರಂಭಗೊಂಡಿದೆ.

ದಾವಣಗೆರೆಯಲ್ಲಿ ಸಿದ್ದೇಶ್ವರ ಅವರ ಪತ್ನಿಗೆ ಟಿಕೆಟ್ ಕೊಟ್ಟಿರುವುದು ಇನ್ನುಳಿದ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.ಅಲ್ಲಿ ‘ಗೋ ಬ್ಯಾಕ್ ಸಿದ್ದೇಶ್ವರ’ ಘೋಷಣೆ ಮೊಳಗಿದೆ.

ಮಾಜಿ ಸಚಿವರಾದ ಎಸ್ ವಿ ರವೀಂದ್ರನಾಥ ಎಂ ಪಿ ರೇಣುಕಾಚಾರ್ಯ, ಮಾಜಿ ಎಂಎಲ್ಸಿ ಶಿವಯೋಗಿ ಸ್ವಾಮಿ ಮೊದಲಾದವರು ತಿರುಗಿ ಬಿದ್ದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಪ್ಪಳ ಸಂಸದ ಕರಡಿ ಸಂಗಣ್ಣ ಅಭಿಮಾನಿಗಳು ಬಿಜೆಪಿ ಕಚೇರಿಗೆ ನುಗ್ಗಿ ಕುರ್ಚಿ ಮೇಜುಗಳನ್ನು ದ್ವಂಸಗೊಳಿಸಿದ್ದಾರೆ. ಕರಡಿ ಸಂಗಣ್ಣ ಮನೆಗೆ ಬೆಂಬಲ ಕೊರಲು ಬಂದ ಅಭ್ಯರ್ಥಿ ಡಾ. ಕೆ ಬಸವರಾಜ್ ವಿರುದ್ಧವು ಬಿಜೆಪಿ ಕಾರ್ಯಕರ್ತರು ಘೇರಾವ್ ಹಾಕಿದ್ದಾರೆ.

ಧಾರವಾಡ ಲೋಕಸಭಾ ಕ್ಷೇತ್ರದ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಬೇಸರಗೊಂಡಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಯಡಿಯೂರಪ್ಪ ನಿವಾಸಕ್ಕೆ ತೆರಳಿ ಮಾತುಕತೆ ನಡೆಯುತ್ತಿದ್ದಾರೆ.

ಟಿಕೆಟ್ ಮುಂಚಿತ ಮಾಜಿ ಸಿಎಂ ಡಿ.ವಿ ಸದಾನಂದ ಗೌಡ, ಮಾಜಿ ಸಚಿವ ಸಿ ಟಿ ರವಿ ಈಶ್ವರಪ್ಪ ನಿವಾಸಕ್ಕೆ ಭೇಟಿ ನೀಡಿ ಮುಂದಿನ ಬೆಳವಣಿಗೆಯು ಬಗ್ಗೆ ಚರ್ಚಿಸಿದ್ದಾರೆ.

ಟಿಕೆಟ್ ವಂಚಿತ ಪ್ರತಾಪ್ ಸಿಂಹ ಹಾಗೂ ಅವರ ಬೆಂಬಲಿಗರು ಪ್ರತಿಭಟನೆ ಬಿಟ್ಟು ತಣ್ಣಗಾಗಿದ್ದಾರೆ.

ಮಾರ್ಚ್ 18ಕ್ಕೆ ಶಿವಮೊಗ್ಗದಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆಯುವ ಸಭೆಗೆ ಈ ಎಲ್ಲಾ ಟಿಕೆಟ್ ವಂಚಿತ ಅಭ್ಯರ್ಥಿಗಳು ಹಾಜರಾಗುತ್ತಾರೋ.‌ ಇಲ್ಲವೋ.. ಎಂಬುದನ್ನು ಕಾದು ನೋಡಬೇಕಾಗಿದೆ.

 

Related Articles

Back to top button