ಬಾರ್ಕೂರು ಹನೇಹಳ್ಳಿ ಗುಂಡಿಕ್ಕಿ ಹತ್ಯೆ ಪ್ರಕರಣ ಹಿಂದೆ ದೊಡ್ಡ ಡೀಲ್: ಹೋರಾಟದ ಎಚ್ಚರಿಕೆ ನೀಡಿದ ರಿಪಬ್ಲಿಕ್ ಪಾರ್ಟಿ ಆಗ್ರಹ

Views: 134
ಪಿಸ್ತೂಲಿನಿಂದ ಗುಂಡಿಕ್ಕಿ ಹನೆಹಳ್ಳಿಯ ದಲಿತ ಯುವಕ ಕೃಷ್ಣ ಎಂಬವರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾಧ್ಯಕ್ಷ ವಿಶ್ವನಾಥ ಪೇತ್ರಿ ಹೇಳಿದರು.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಗಂಭೀರ ಪ್ರಕರಣದ ಹಿಂದೆ ಬಹಳ ದೊಡ್ಡ ಡೀಲ್ ನಡೆದಿರುವ ಸಂಶಯ ಕಾಡುತ್ತಿದೆ. ಇದನ್ನು ಪೊಲೀಸರು ಕೂಡಲೇ ಬೇಧಿಸಿ ಆರೋಪಿಗಳನ್ನು ಬಂಧಿಸಬೇಕು. ಈ ಮೂಲಕ ನೊಂದ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದರು.
ಜಾಗದ ವಿವಾದ, ಗೆಳೆಯರ ಸಹವಾಸ ವಿಚಾರಗಳನ್ನು ಬಿಟ್ಟು ಪೊಲೀಸರು ಬೇರೆ ದಿಕ್ಕಿನಲ್ಲಿ ತನಿಖೆ ಮಾಡಬೇಕು. ಪೊಲೀಸ್ ಇಲಾಖೆ ಈ ಬಗ್ಗೆ ಯಾವುದೇ ಕ್ರಮ ಜರಗಿಸದಿದ್ದರೆ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಿ ಹೋರಾಟ ನಡೆಸಲಾಗು ವುದು ಎಂದು ಅವರು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಗಣೇಶ ಹೊಸಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಡೂರು, ಮುಖಂಡರಾದ ವಿಘ್ನೇಶ್ ಬ್ರಹ್ಮಾವರ, ಸತೀಶ್, ಜ್ಯೋತಿ ಶಿರಿಯಾರ, ಗಫೂರ್ ಕಾರ್ಕಳ, ಸತೀಶ್ ಹೈಕಾಡಿ, ಗಜೇಂದ್ರ ಕಾರ್ಕಳ, ಪ್ರಕಾಶ್ ಹೇರೂರು ಉಪಸ್ಥಿತರಿದ್ದರು