ಧಾರ್ಮಿಕ
ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಪದ್ಮಶಾಲಿ/ಶೆಟ್ಟಿಗಾರ ಸಮಾಜ ಸೇವಾ ಟ್ರಸ್ಟ್: ವಾರ್ಷಿಕ ಮಹಾಸಭೆ ಮತ್ತು ಪದ ಪ್ರಧಾನ ಸಮಾರಂಭ

Views: 60
ಕನ್ನಡ ಕರಾವಳಿ ಸುದ್ದಿ : ಕರಾವಳಿ ಪದ್ಮಶಾಲಿಗರ ಮೂಲ ಕ್ಷೇತ್ರ ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಒಳಪಟ್ಟ ಶ್ರೀ ಬ್ರಹ್ಮಲಿಂಗ ವೀರಭದ್ರ ಪದ್ಮಶಾಲಿ/ ಶೆಟ್ಟಿಗಾರ ಸಮಾಜ ಸೇವಾ ಟ್ರಸ್ಟ್ ಇದರ ಮೂರನೇ ವಾರ್ಷಿಕ ಮಹಾಸಭೆ ಮತ್ತು ಪದಪ್ರಧಾನ ಸಮಾರಂಭ ಜೂನ್ 1ರಂದು ರವಿವಾರ ನಡೆಯಿತು.
ನೂತನ ಅಧ್ಯಕ್ಷರಾಗಿ ಸುಧಾಕರ ವಕ್ವಾಡಿ, ಕಾರ್ಯದರ್ಶಿಯಾಗಿ ಡಾ. ಶಿವಪ್ರಸಾದ್ ಶೆಟ್ಟಿಗಾರ್ ಉಡುಪಿ, ಕೋಶಾಧಿಕಾರಿಯಾಗಿ ಶ್ರೀಮತಿ ಶೋಭಾ ಅರುಣ್ ಕುಮಾರ್ ಶೆಟ್ಟಿಗಾರ್ ಕೆಳಾರ್ಕಳಬೆಟ್ಟು, ಗೌರವ ಅಧ್ಯಕ್ಷರಾಗಿ ಡಾ.ಗೌತಮ್ ಶೆಟ್ಟಿಗಾರ್ ಬಾರ್ಕೂರು, ಟ್ರಸ್ಟ್ ನ ಸದಸ್ಯರಾಗಿ ವಿಠ್ಠಲ್ ಶೆಟ್ಟಿಗಾರ್ ಕೆಳಾರ್ಕಳಬೆಟ್ಟು, ಚಂದ್ರಶೇಖರ ಶೆಟ್ಟಿಗಾರ್ ಹೊಸಾಳ, ಶ್ರೀಮತಿ ಚಂದ್ರಕಲಾ, ವಿರೇಂದ್ರ ಶೆಟ್ಟಿಗಾರ್ ಬ್ರಹ್ಮಾವರ, ಭಾಲಕೃಷ್ಣ ಶೆಟ್ಟಿಗಾರ್ ವಕ್ವಾಡಿ ಆಯ್ಕೆಯಾದರು.
ದೇವಸ್ಥಾನದ ಆಡಳಿತ ಧರ್ಮದರ್ಶಿ ಬಾರ್ಕೂರು ರಂಗನಕೇರಿ ಶ್ರೀನಿವಾಸ ಶೆಟ್ಟಿಗಾರ ಅವರು ಟ್ರಸ್ಟ್ ನ ಪದಾಧಿಕಾರಿಗಳಿಗೆ ಪ್ರಮಾಣ ವಿಧಿ ಬೋಧಿಸಿದರು.
ನಂತರ ಅವರು ಮಾತನಾಡಿ, ದೇವಸ್ಥಾನದ ಆಡಳಿತ ಮಂಡಳಿ ವಿವಿಧ ಸಮಿತಿಗಳ ಸಹಕಾರದೊಂದಿಗೆ ದೇವಸ್ಥಾನದ ಸಮಗ್ರ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಿ ಎಂದರು.
ಇದೇ ಸಂದರ್ಭದಲ್ಲಿ 2024-25 ನೇ ಸಾಲಿನಲ್ಲಿ ತೇರ್ಗಡೆಗೊಂಡ ಎಲ್ಲಾ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.









