ಧಾರ್ಮಿಕ

ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಬ್ರಹ್ಮೋಪನಯನ

Views: 17

video
play-sharp-fill
ಬಾರಕೂರು: ಉಪನಯನ ಹಿಂದೂಗಳ ಸಂಪ್ರದಾಯದಲ್ಲಿ ಪ್ರಮುಖ ಕರ್ಮ. ಈ ಕರ್ಮ ಧಾರ್ಮಿಕ ಆಚರಣೆ ಹಾಗೂ ದೈವಿಕ ಆಚರಣೆ ನಡೆಸಲು ಪ್ರಥಮ ಸೋಪಾನ.

ಬ್ರಹ್ಮೋಪನಯನ ಆದವರಿಗೆ ಮನಸ್ಸನ್ನು ಪಂಚೇಂದ್ರಿಯಗಳ ಹಿಡಿತದಲ್ಲಿರುವಂತೆ ಮಾಡುವ ಸಾಮರ್ಥ್ಯ ಈ ಕಾರ್ಯದಲ್ಲಿದೆ.

ಮಕ್ಕಳಿಗೆ ಸಕಾಲದಲ್ಲಿ ಉಪನಯನ ಸಂಸ್ಕಾರವನ್ನು ನೆರವೇರಿಸುವ ಮೂಲಕ ಮಕ್ಕಳನ್ನು ವಂಶದ ಉತ್ತಮ ವಿಚಾರಗಳಿಗೆ, ಸದಾಚಾರಕ್ಕೆ,ನಿಜವಾದ ವಾರಸುದಾರರನ್ನಾಗಿ ಮಾಡುತ್ತದೆ. ಆಗ ಮಾತ್ರ ತಂದೆ ತಾಯಿಗಳು ಹಿರಿಯರು ತಮಗೆ ನೀಡಿದ ಶಕ್ತಿ ಸೌಖರ್ಯಗಳನ್ನು ಸದುಪಯೋಗಪಡಿಸಿದಂತೆ ಆಗುತ್ತದೆ.

ಅನ್ನವನ್ನು ಸಂಪಾದಿಸುವ ‘ಪರಾ’ ವಿದ್ಯೆ ಅಕ್ಷರ ರೂಪದಲ್ಲಿದ್ದರೆ, ಪಶುತ್ವದಿಂದ ಪಶುಪತಿತ್ವದೆಡೆಗೆ ಸಾಗಲು ಆಧ್ಯಾತ್ಮಿಕ ‘ಅಪರಾ’ ವಿದ್ಯೆಯ ಮೂಲಕ ಸುಕ್ಷಿತ, ಸಂಸ್ಕಾರವಂತರಾಗಲು ಸದ್ಭಾವ- ಸದ್ಗುಣ, ಭಕ್ತಿ ಶ್ರದ್ಧೆಯಿಂದ ಆಂತರಿಕ ಸಂಪತ್ತು ಹೆಚ್ಚಿಸಿದಷ್ಟು ಬಹಿರಂಗದಲ್ಲಿ ಆತ್ಮಜ್ಞಾನ, ಬ್ರಹ್ಮ ಜ್ಞಾನ ಪಡೆದ ಉಪನಯನದಿಂದ ಜೀವನದಲ್ಲಿ ನಲಿವು ಗೆಲುವು ಜಾಸ್ತಿಯಾಗಿ ಬದುಕನ್ನು ಆನಂದಿಸುವ ಪ್ರೀತಿ ತಮ್ಮದಾಗುತ್ತದೆ.

ಈ ನಿಟ್ಟಿನಲ್ಲಿ ಉಡುಪಿ ಸಂತೆಕಟ್ಟೆಯ ಶ್ರೀ ಭಾಸ್ಕರ್ ಶೆಟ್ಟಿಗಾರ್ (ಪೊಲೀಸ್ ಇಲಾಖೆ) ಶ್ರೀಮತಿ ಸವಿತಾ ಭಾಸ್ಕರ್ (ಅಂಚೆ ಇಲಾಖೆ) ಇವರ ಪುತ್ರದ್ವಯರಾದ ಚಿರಂತನ್ ಹಾಗೂ ಮೇಘ ಶ್ಯಾಮ ಇವರ ಉಪನಯನ ಕಾರ್ಯಕ್ರಮವು ಜುಲೈ 5 ರಂದು ತಮ್ಮ ಕುಲ ದೇವಸ್ಥಾನ ಬಾರಕೂರು ಶ್ರೀ ಬ್ರಹ್ಮಲಿಂಗವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ನಡೆಯಿತು.

ವೇದಮೂರ್ತಿ ರಮೇಶ್ ಭಟ್ ನೇತೃತ್ವದಲ್ಲಿ ವಟುಗಳಿಗೆ ಆತ್ಮ ಜ್ಞಾನ ಮತ್ತು ಬ್ರಹ್ಮ ಜ್ಞಾನದ ಶಾಸ್ತ್ರೋಕ್ತ ವಿಧಿ ವಿಧಾನಗಳನ್ನು ನಡೆಸಿದರು.

ದೇವಳದ ಆಡಳಿತ ಮೊಕ್ತೇಸರ ರಾದ ಡಾ. ಸಿ .ಜಯರಾಮ ಶೆಟ್ಟಿ ಗಾರ ಅವರು ವಟುಗಳಿಗೆ ಆಶೀರ್ವಾದ ನೀಡಿದರು.

ಈ ಸಂದರ್ಭದಲ್ಲಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ, ಬ್ರಹ್ಮಲಿಂಗ ವೀರಭದ್ರ ಪದ್ಮಶಾಲಿ/ ಶೆಟ್ಟಿಗಾರ್ ಸಮಾಜ ಟ್ರಸ್ಟ್( ರಿ), ಅಧ್ಯಕ್ಷ ಬಾರ್ಕೂರು ಶ್ರೀನಿವಾಸ ಶೆಟ್ಟಿಗಾರ್,  ಶ್ರೀ ದುರ್ಗಾಪರಮೇಶ್ವರಿ ಮಹಿಳಾ ವೇದಿಕೆ ಅಧ್ಯಕ್ಷೆ ಶ್ರೀಮತಿ ಆಶಾಲತಾ ವಿಠಲ ಶೆಟ್ಟಿಗಾರ್, ಸಂಘಟನಾ ಸಮಿತಿಯ ಅಧ್ಯಕ್ಷ ಆನಂದ ಶೆಟ್ಟಿಗಾರ್, ಸಹ ಮೊಕ್ತೇಸರರು, ಆಡಳಿತ ಮಂಡಳಿಯ ಪದಾಧಿಕಾರಿಗಳು ಮತ್ತು ಹಿರಿಯರು ಆಶೀರ್ವಾದ ನೀಡಿದರು.

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾ (ರಿ) ಇದರ ಅಧ್ಯಕ್ಷರು ರಾಮದಾಸ್ ಶೆಟ್ಟಿಗಾರ್, ಉಪಾಧ್ಯಕ್ಷರು ಸತೀಶ್ ಶೆಟ್ಟಿಗಾರ್, ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘ (ರಿ),ಇದರ ಕಾರ್ಯದರ್ಶಿ ಉಮೇಶ್ ಕಾಪು, ಸಾಲಿಕೇರಿ ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಳದ ಆಡಳಿತ ಮೊಕ್ತೇಸರ ಶ್ರೀ ಸುರೇಶ ಶೆಟ್ಟಿಗಾರ್, ಬ್ರಹ್ಮಾವರ ಕ್ರೈಂ ಬ್ರಾಂಚ್ ಎಸ್ ಐ ಪುಷ್ಪ ಸೀತಾರಾಮ್ ಶೆಟ್ಟಿಗಾರ್, ಉಡುಪಿ ಅಂಚೆ ಅಧೀಕ್ಷಕರು ರಮೇಶ್ ಪ್ರಭು, ಅಬ್ದುಲ್ ಅಹದೆ,ಐಪಿಎಸ್, ಪೊಲೀಸ್ ಇನ್ಸ್ಪೆಕ್ಟರ್ ಪ್ರಮೋದ್ ಕುಮಾರ್, ಇನ್ಸ್ಪೆಕ್ಟರ್ ಸೋಮಪ್ಪ ನಾಯಕ್, ಇನ್ಸ್ಪೆಕ್ಟರ್ ರೇವತಿ ಶೆಟ್ಟಿಗಾರ್ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

 

Related Articles

Back to top button