ಕ್ರೀಡೆ
ಬಸ್ರೂರು ಸ್ಪೋರ್ಟ್ಸ್ ಕ್ಲಬ್: ಲೆಜೆಂಡ್ ಟ್ರೋಫಿ- 2025 ಅನಾವರಣ, ಹುತಾತ್ಮ ಯೋಧನಿಗೆ ನುಡಿ ನಮನ

Views: 170
ಕನ್ನಡ ಕರಾವಳಿ ಸುದ್ದಿ: ಬಸ್ರೂರು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಹುತಾತ್ಮರಾದ ಯೋಧ ಅನೂಪ್ ಪೂಜಾರಿಗೆ ಬಸ್ರೂರು ನಿವೇದಿತಾ ಪ್ರೌಢಶಾಲೆಯಲ್ಲಿ ನುಡಿ ನಮನ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಲೆಜೆಂಡ್ ಟ್ರೋಫಿ- 2025 ಅನಾವರಣಗೊಳಿಸಲಾಯಿತು.
ಈ ಸಂದರ್ಭದಲ್ಲಿ ಬಸ್ರೂರು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಸತ್ಯನಾರಾಯಣ, ಕಾರ್ಯದರ್ಶಿ ವಿವೇಕಾನಂದ, ಖಜಾಂಚಿ ಅಶೋಕ್ ಬಿಕೆ, ನಿಖಿಲ್, ವಿಘ್ನೇಶ್ ಆಚಾರ್, ಬಸವರಾಜ ಬಸ್ರೂರು, ಅಜಯ್ ಆಚಾರ್ಯ, ಸೃಜನ್ ಬಸ್ರೂರು ಉಪಸ್ಥಿತರಿದ್ದರು.
ಆಟೋಟ ಸ್ಪರ್ಧೆಗಳು: ಬಸ್ರೂರು ಶ್ರೀ ದೇವಿ ದೇವಸ್ಥಾನದ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಸ್ರೂರು ಸ್ಪೋರ್ಟ್ಸ್ ಕ್ಲಬ್ (ಆರ್) ಮಹಿಳೆ ಮತ್ತು ಮಕ್ಕಳಿಗಾಗಿ ಸ್ಕೀಲ್ ಗೇಮ್ಸ್ ಹಾಗೂ ಆಟೋಟದ ಸ್ಪರ್ಧೆ ನಡೆಸಲಾಯಿತು.ಸುಮನ ಟೀಚರ್.ದೈಹಿಕ ಶಿಕ್ಷಕ ಅಣ್ಣಪ್ಪ ಗೌಡ .ಶ್ರೀದೇವಿ ಶೆಟ್ಟಿಗಾರ್ ಹಾಗೂ ಶಫಿ ಸಹಕರಿಸಿದರು.