ಕರಾವಳಿ
ಬಸ್ರೂರು ಮತ್ತು ಬಳ್ಕೂರು ಪರಿಸರದಲ್ಲಿ ಸರಣಿ ಕಳ್ಳತನ

Views: 233
ಕುಂದಾಪುರ: ಇತ್ತೀಚೆಗೆ ಕರಾವಳಿಯ ಉಡುಪಿ ಮತ್ತು ತೆಕ್ಕಟ್ಟೆಯಲ್ಲಿ ಮುಸುಕುದಾರಿ ತಂಡದಿಂದ ಕಳವಿಗೆ ಯತ್ನಿಸಿದ ಕಳ್ಳರ ಚಲನವಲನ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಬಸ್ರೂರು ಹಾಗೂ ಬಳ್ಕೂರು ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ಸರಣಿ ಕಳ್ಳತನ ನಡೆಯುತ್ತಿದ್ದು, ಜನರಲ್ಲಿ ಭಯಭೀತಿ ಮೂಡಿಸಿದೆ
ಹೊಸ ವರ್ಷದ ಹಿಂದಿನ ದಿನ ಬಸ್ರೂರು ಬಸ್ ನಿಲ್ದಾಣದ ಸಮೀಪ ತರಕಾರಿ ಅಂಗಡಿಯ ಮಾಡಿನ ಹೆಂಚು ತೆಗೆದು ನುಗ್ಗಿದ ಕಳ್ಳರು 5 ಸಾವಿರಕ್ಕೂ ಹೆಚ್ಚು ಹಣವನ್ನು ಕದ್ದೊಯ್ದಿದಿದ್ದಾರೆ ಅಲ್ಲಿಯೇ ಪಕ್ಕದಲ್ಲಿರುವ ಕೋಳಿ ಅಂಗಡಿಗೆ ನುಗ್ಗಿದ ಕಳ್ಳರು ಹಣ ಸಿಗದೆ ವಾಪಸ್ ಆಗಿದ್ದಾರೆ.
ಇದಕ್ಕೂ ಹಿಂದೆ ಬಳ್ಕೂರು ಕಳುವಿನ ಬಾಗಿಲು ಸಮೀಪ ಎರಡು ಮನೆಗಳ ಅಂಗಳದಲ್ಲಿ ಒಣಗಿಸಿದ ಸಾವಿರಾರು ರೂಪಾಯಿ ಮೌಲ್ಯದ ಅಡಿಕೆಯನ್ನು ಕದ್ದೊಯ್ದಿದಿದ್ದಾರೆ. ಈ ಯಾವ ಪ್ರಕರಣವು ಪೋಲಿಸರಿಗೆ ದೂರನ್ನು ನೀಡಿಲ್ಲ ಎಂದು ತಿಳಿದು ಬಂದಿದೆ.