ಸಾಂಸ್ಕೃತಿಕ
ಬಡಗುತಿಟ್ಟಿನ ಹೆಸರಾಂತ ಯಕ್ಷಗಾನ ಕಲಾವಿದ ಗಣಪತಿ ಬೈಲಗದ್ದೆ ನಿಧನ

Views: 0
ಹೊನ್ನಾವರ ತಾಲೂಕಿನ ಬೈಲಗೆದ್ದೆ ನಿವಾಸಿ ಬಡಗುತಿಟ್ಟಿನ ಹೆಸರಾಂತ ಯಕ್ಷಗಾನ ಕಲಾವಿದ ಗಣಪತಿ ಬೈಲಗದ್ದೆ (39) ನಿಧನರಾದರು.
ಅವಿವಾಹಿತರಾಗಿದ್ದ ಅವರು ತಂದೆ, ತಾಯಿ ಹಾಗೂ ಅಪಾರ ಯಕ್ಷಗಾನ ಕಲಾಭಿಮಾನಿಗಳನ್ನು ಅಗಲಿದ್ದಾರೆ.
ಗುಣವಂತೆಯ ಯಕ್ಷಗಾನ ಕಲಾ ಕೇಂದ್ರದಲ್ಲಿ ಕೆರೆಮನೆ ಶಂಭು ಹೆಗಡೆ, ಹಾಗೂ ಹೆರಂಜಾಲು ಗೋಪಾಲ್ ಗಾಣಿಗ ಅವರ ಶಿಷ್ಯರಾಗಿ ಪ್ರಬುದ್ಧ ಕಲಾವಿದರಾಗಿ ಬೆಳೆದಿದ್ದಾರೆ.
ನಂತರ ಅವರು ಗುಂಡುಬಾಳ, ಮಡಾಮಕ್ಕಿ ,ಸಿಗಂದೂರು, ಮತ್ತು ಬಡಗಿನ ಪ್ರಸಿದ್ಧ ಡೇರೆ ಮೇಳಗಳಾದ ಸಾಲಿಗ್ರಾಮ, ಪೆರ್ಡೂರು ಮೇಳದಲ್ಲಿ ಎರಡು ದಶಕಗಳ ಕಾಲ ವಿವಿಧ ಪಾತ್ರಗಳಲ್ಲಿ ಅಭಿನಯಿಸಿದ್ದರು. ಯಕ್ಷಗಾನ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇತ್ತೀಚಿಗೆ ತೀವ್ರ ಅನಾರೋಗ್ಯದ ಕಾರಣದಿಂದ ಕಳೆದ ವರ್ಷದಿಂದ ತಿರುಗಾಟವನ್ನು ಮೊಟಕುಗೊಳಿಸಿ. ಚಿಕಿತ್ಸೆ ಪಡೆಯುತ್ತಿದ್ದಾರೆ. ಯಕ್ಷಗಾನ ಕಲಾವಿದನ ನಿಧನಕ್ಕೆ ಉಡುಪಿ ಯಕ್ಷಗಾನ ಕಲಾ ರಂಗ ಕಲಾವಿದರು. ಮತ್ತು ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ