ಕ್ರೀಡೆ
ಫೆ.4 ಕ್ಕೆ:ಬಸ್ರೂರು ಸ್ಪೋರ್ಟ್ಸ್ ಕ್ಲಬ್ ಬಸ್ರೂರು 40+ಲೆಜೆಂಡ್ಸ್ ಟ್ರೋಫಿ -2024, ಹಗ್ಗ ಜಗ್ಗಾಟ ಸ್ಪರ್ಧೆ

Views: 110
ಕುಂದಾಪುರ : ಬಸ್ರೂರು ಸ್ಪೋರ್ಟ್ಸ್ ಕ್ಲಬ್ ಬಸ್ರೂರು ಇವರ ಆಶಯದಲ್ಲಿ 40 + ಲೆಜೆಂಡ್ಸ್ ಕ್ರಿಕೆಟ್ ಟ್ರೋಫಿ- 2024 (ಸೀಸನ್ 2 ) ಹಾಗೂ ಹಗ್ಗ ಜಗ್ಗಾಟ ಸ್ಪರ್ಧೆ ಫೆ.4 ರಂದು ಬಸ್ರೂರು ಶ್ರೀ ಶಾರದಾ ಕಾಲೇಜು ಮೈದಾನದಲ್ಲಿ ನಡೆಯಲಿದೆ.
ಸಂಘದ ಪ್ರಥಮ ವಾರ್ಷಿಕೋತ್ಸವ ಸಮಾರಂಭದ ಸಭಾ ಕಾರ್ಯಕ್ರಮ ಮತ್ತು ವಿವಿಧ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮವು ಫೆ.4 ರಂದು ಸಂಜೆ 7.30ಕ್ಕೆ ಬಸ್ರೂರು ಶ್ರೀದೇವಿ ದೇವಸ್ಥಾನದ ಮೈದಾನದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ.
- ಎಲ್ಲಾ ಸದಸ್ಯರಿಗೆ ಭಾಗವಹಿಸಲು ಅವಕಾಶವಿದೆ.
- ಮಹಿಳೆಯರಿಗೆ ಪ್ರಪ್ರಥಮ ಬಾರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ಜರಗಲಿದೆ.
- ಈ ಸಂದರ್ಭದಲ್ಲಿ ಕ್ಯಾನ್ಸರ್ ಪೀಡಿತ ರೋಗಿಗಳಿಗೆ ಹಾಗೂ ಕ್ರೀಡೆಯಲ್ಲಿ ಉನ್ನತ ಸಾಧನೆಗೈದ ಕ್ರೀಡಾ ಸಾಧಕರಿಗೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಸನ್ಮಾನ
- ಎಸ್ ಎಸ್ ಎಲ್ ಸಿ 2022 -23 ನೇ ಸಾಲಿನಲ್ಲಿ ವ್ಯಾಸಂಗ ಮಾಡಿರುವ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಗೌರವ
- ಕ್ರಿಕೆಟ್ ಪಂದ್ಯಾಟದಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 30,000 ರೂಪಾಯಿ, ಶಾಶ್ವತ ಫಲಕ
- ದ್ವಿತೀಯ ಬಹುಮಾನ 20,000 ರೂಪಾಯಿ ಮತ್ತು ಶಾಶ್ವತ ಫಲಕ ನೀಡಿ ಗೌರವಿಸಲಾಗುವುದು.
- ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 8,000 ರೂಪಾಯಿ ಶಾಶ್ವತ ಫಲಕ
- ದ್ವಿತೀಯ ಬಹುಮಾನ 4,000 ರೂಪಾಯಿ, ಶಾಶ್ವತ ಫಲಕ ನೀಡಿ ಗೌರವಿಸಲಾಗುವುದು.
- ಮೇಲಿನ ಸ್ಪರ್ಧೆಯಲ್ಲಿ ಭಾಗವಹಿಸಲು ಬಸ್ರೂರು, ಕೋಣೆ, ಕಂಡ್ಲೂರು, ಹಟ್ಟಿಕುದ್ರು, ಆನಗಳ್ಳಿ, ಹುಣ್ಸೆಮಕ್ಕಿ ವ್ಯಾಪ್ತಿಯಲ್ಲಿನ ಸಂಘದ ಸದಸ್ಯರಾದವರು ಮಾತ್ರ ಅರ್ಹರಾಗಿರುತ್ತಾರೆ.
- ಕ್ರೀಡೆಯಲ್ಲಿ ಭಾಗವಹಿಸುವ ಹೊಸ ಸದಸ್ಯರಿಗೆ 1,000 ಸಾವಿರ ರೂಪಾಯಿ. ಪುನರ್ ನವೀಕರಣ ಸದಸ್ಯರಿಗೆ 500 ರೂಪಾಯಿ ಮಹಿಳಾ ಸದಸ್ಯರಿಗೆ 100 ರೂಪಾಯಿ ಪ್ರವೇಶ ಶುಲ್ಕ ನೀಡಿ ಭಾಗವಹಿಸಲು ಕೋರಲಾಗಿದೆ
- ಎಲ್ಲಾ ಕಾರ್ಯಕ್ರಮಗಳು ನೇರ ಪ್ರಸಾರವಿದೆ.
- ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಹೆಸರನ್ನು ಜನವರಿ 16ರರೊಳಗೆ ನೋಂದಾಯಿಸಬೇಕು.
- ಸಂಘದ ಸದಸ್ಯತ್ವವನ್ನು ನವೀಕರಣ ಮಾಡಿ ಕೊಳ್ಳಿ
ಬಸ್ರೂರು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಸತ್ಯನಾರಾಯಣ ಶೆಟ್ಟಿಗಾರ್, ಕಾರ್ಯದರ್ಶಿ ವಿವೇಕ ಶೆಟ್ಟಿಗಾರ್, ಉಪಾಧ್ಯಕ್ಷ ಹರೀಶ್ ಹೆಗ್ಡೆ, ಕೋಶಾಧಿಕಾರಿ ಅಶೋಕ್ ಬಿ.ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ 9986476286/ 9682665811 9964371178/ 7760812943 7676047369