ಪ್ರೇಯಸಿ ಜೊತೆ ಸೇರಿ ಪತ್ನಿಯ ಕೊಲೆಗೈದ ಪತಿ!

Views: 66
ದಾವಣಗೆರೆ: ವ್ಯಕ್ತಿಯೋರ್ವನು ಪ್ರೇಯಸಿಯ ಜೊತೆ ಸೇರಿ ತನ್ನ ಪತ್ನಿಯನ್ನೇ ಕೊಲೆಗೈದ ಘಟನೆ ದಾವಣಗೆರೆಯ ಕೊಡಗನೂರಿನಲ್ಲಿ ನಡೆದಿದೆ.
ಹತ್ಯೆಯಾದ ಮಹಿಳೆಯನ್ನು ಹೊಳಲ್ಕೆರೆಯ ಸಾಸಲುಹಳ್ಳ ಗ್ರಾಮದ ಕಾವ್ಯಾ ಎಂದು ಗುರುತಿಸಲಾಗಿದೆ. ಕಾವ್ಯ ಹಾಗೂ ಕಾಗಳಗೆರೆ ಗ್ರಾಮದ ನಿವಾಸಿ ಸಚಿನ್ ಇವರಿಬ್ಬರಿಗೆ ಐದು ವರ್ಷಗಳ ಹಿಂದೆ ಮದುವೆ ಆಗಿತ್ತು. ಇವರಿಗೆ ಒಂದು ಮಗು ಕೂಡ ಇದೆ ಎನ್ನಲಾಗಿದೆ.
ದಾವಣಗೆರೆಯ ಕಡ್ಲೆಬಾಳು ಗ್ರಾಮದ ನಿವಾಸಿ ಚೈತ್ರಾ ಎಂಬಾಕೆಯ ಜೊತೆ ಸಂಬಂಧ ಬೆಳೆಸಿದ್ದ ಸಚಿನ್ ಆಕೆಯನ್ನು ಎರಡನೇ ಮದುವೆಯಾಗಿದ್ದ ಎಂದು ತಿಳಿಯಲಾಗಿದೆ. ಇದೇ ವಿಚಾರಕ್ಕೆ ಜಗಳ ಆಗಿ ಪತ್ನಿ ಕಾವ್ಯಳ ತಮವರು ಮನೆ ಹೋಗಿದ್ದಳು. ಈ ವೇಳೆ ಮತ್ತೆ ಗಲಾಟೆಯಾಗಿದ್ದು, ಬಳಿಕ ಚೈತ್ರಾ ಹಾಗೂ ಸಚಿನ್ ಸೇರಿ ಆಕೆಯ ಕತ್ತು ಹಿಸುಕಿ ಹತ್ಯೆಗೈದಿದ್ದಾರೆ. ಬಳಿಕ ಗೋಣಿಚೀಲದಲ್ಲಿ ತುಂಬಿ ಕೆರೆಗೆ ಎಸೆದು ಹೋಗಿದ್ದಾರೆ. ಇತ್ತ ಕಾವ್ಯಾಳ ಸುಳಿವಿಲ್ಲದೇ ಇರುವುದರಿಂದ ಅನುಮಾನಗೊಂಡ ಆಕೆಯ ಪೋಷಕರು ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ ಪೊಲೀಸರು ಸಚಿನ್‍ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆಗೈದಿದ್ದಾಗಿ ಬಾಯ್ಬಿಟ್ಟಿದ್ದಾನೆ. ಕಾವ್ಯಳ ಶವ 19 ದಿನಗಳ ಬಳಿಕ ತುಂಬಿ ಗ್ರಾಮದ ಕೆರೆಯಲ್ಲಿ ಪತ್ತೆಯಾಗಿದೆ. ಇದೀಗ ಪೊಲೀಸರು ಚೈತ್ರಾ ಹಾಗೂ ಸಚಿನ್‍ನನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.