ಸಾಮಾಜಿಕ
ಪ್ರೇಮಿಗಳ ದಿನಾಚರಣೆಯಂದು ಕತ್ತೆಗಳಿಗೆ ಮದುವೆ,ಪ್ರೀತಿ-ಪ್ರೇಮ ಪ್ರಾಣಿಗಳಲ್ಲೂ ಇರುತ್ತೆ, ವಾಟಾಳ್ ನಾಗರಾಜ್

Views: 54
ವಿಶ್ವದಾದ್ಯಂತ ಪ್ರೇಮಿಗಳ ದಿನಾಚರಣೆಯ ಸಂಭ್ರಮ. ಈ ವಿಶೇಷ ದಿನಾಚರಣೆ ಹಿನ್ನೆಲೆ ಪ್ರೇಮಿಗಳ ವಿವಾಹ ಆಹ್ವಾನ ಪತ್ರಿಕೆಯೊಂದು ವೈರಲ್ ಆಗಿದೆ.
ಕನ್ನಡ ಚಳವಳಿ ವಾಟಾಳ್ ನಾಗರಾಜ್ ಅವರ ಪಕ್ಷದಿಂದ ಆಹ್ವಾನ ಪತ್ರಿಕೆ ವೈರಲ್ ಆಗಿದೆ. ಪ್ರೇಮ-ಪ್ರೀತಿ ಪ್ರಾಣಿಗಳಲ್ಲೂ ಕೂಡ ಇರುತ್ತೆ ಎಂದು ಆಹ್ವಾನ ಪತ್ರಿಕೆಯಲ್ಲಿ ಬರೆಯಲಾಗಿದೆ.
ಆಹ್ವಾನ ಪತ್ರಿಕೆಯಲ್ಲಿ ಗಂಡು-ಹೆಣ್ಣು ಕತ್ತೆಗಳಿಗೆ ಸನ್ಮಾನ ಮಾಡಲಿದ್ದು, ಸನ್ಮಾನ ಮಾಡಿದ ನಂತರ ವಿನೂತನ ಮದುವೆ ಮಾಡಲಿದ್ದಾರೆ. ಮೈಸೂರು ಬ್ಯಾಂಕ್ ವೃತ್ತದಿಂದ ಹೊರಟು ನಗರದ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ. ಗುಲಾಬಿ ಹೂಗಳನ್ನು ಹಂಚುವ ಮೂಲಕ ಮೆರವಣಿಗೆ ಮಾಡಲಿದ್ದಾರೆ ಎಂದು ಬರೆಯಲಾಗಿದೆ.
ಸದ್ಯ ಸಿಲಿಕಾನ್ ಸಿಟಿಯಲ್ಲಿ ಪ್ರೇಮಿಗಳ ದಿನಾಚರಣೆ ವಿಶೇಷ ದಿನದಂದು ವಾಟಾಳ್ ನಾಗರಾಜ್ ಅವರ ಪಕ್ಷದಿಂದ ಗಂಡು-ಹೆಣ್ಣು ಕತ್ತೆಗಳಿಗೆ ಸನ್ಮಾನ ಜೊತೆಗೆ ಮದುವೆ ಕೂಡ ಮಾಡಲು ಹೊರಟಿದ್ದಾರೆ.