ಪ್ರೀತಿಸಿದ ಹುಡುಗಿಗೆ ಬೇರೊಬ್ಬನ ಜತೆಗೆ ಅಕ್ರಮ ಸಂಬಂಧ: ಮನನೊಂದು ಯುವಕ ಆತ್ಮಹತ್ಯೆ

Views: 228
ಬೆಂಗಳೂರು: ಪ್ರೀತಿಸಿದ ಹುಡುಗಿಗೆ ಬೇರೊಬ್ಬನ ಜತೆಗೆ ಅಕ್ರಮ ಸಂಬಂಧವಿದೆ ಎಂದು ನೊಂದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅನ್ಬರಾಸನ್ ಮೃತಪಟ್ಟವರು.
ಆತ್ಮಹತ್ಯೆಗೆ ಯುವತಿಯೇ ಪ್ರಚೋದನೆ ನೀಡಿದ್ದಾಳೆ ಎಂಬ ಗಂಭೀರ ಆರೋಪವನ್ನು ಮೃತ ಕುಟುಂಬಸ್ಥರು ಆರೋಪಿಸಿ, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿದ್ಯಾ ಎಂಬಾಕೆ ಈ ಹಿಂದೆಯೇ ಮದುವೆಯಾಗಿ ವಿಚ್ಚೇದನ ಪಡೆದಿದ್ದಳು. ವಿಚ್ಚೇದನ ಪಡೆದ ಸ್ವಲ್ಪ ದಿನದಲ್ಲೇ ಅನ್ಬರಾಸನ್ ಜತೆಗೆ ಪ್ರೀತಿಯಾಗಿತ್ತು. ಇವರಿಬ್ಬರು ಆರು ತಿಂಗಳಿಂದ ಒಟ್ಟಿಗೆ ಇದ್ದಿದ್ದು.ಮಾತ್ರವಲ್ಲದೇ ವಿದ್ಯಾ ಹಾಗೂ ಅನ್ಬರಾಸನ್ ಪತಿ-ಪತ್ನಿ ಎಂದು ಹೇಳಿ ಚಿಕ್ಕನಾಗಮಂಗಲದ ಬಾಡಿಗೆ ಮನೆಯಲ್ಲಿ ವಾಸವಿದ್ದರು.
ವಿದ್ಯಾ ಐಟಿ ಕಂಪನಿ ಉದ್ಯೋಗಿ ಆಗಿದ್ದು, ಅನ್ಬರಾಸನ್ ಫ್ಲಿಪ್ ಕಾರ್ಟ್‌ನಲ್ಲಿ ಮ್ಯಾನೇಜರ್ ಆಗಿದ್ದ. ಅನ್ಬರಾಸನ್ ಜತೆ ಪ್ರೀತಿಯಲ್ಲಿ ಇರುವಾಗಲೇ ವಿದ್ಯಾ ಮತ್ತೊಬ್ಬನ ಸಹವಾಸ ಮಾಡಿದ್ದಾಳೆ ಎನ್ನಲಾಗಿದೆ. ಸಂತೋಷ್ ಎಂಬಾತನ ಜತೆಗೆ ಅಕ್ರಮ ಸಂಬಂಧದಲ್ಲಿ ಇದ್ದಳು. ಮನೆಯಲ್ಲಿ ಸಂತೋಷ್ ಹಾಗೂ ವಿದ್ಯಾ ಜತೆಯಲ್ಲಿ ಇದ್ದದ್ದನ್ನು ಅನ್ಬರಾಸನ್ ಕಣ್ಣಾರೆ ಕಂಡಿದ್ದ
ಇದರಿಂದ ಮನನೊಂದಿದ್ದ ಅನ್ಬರಾಸನ್ ವಿದ್ಯಾಗೆ ಬುದ್ಧಿಯನ್ನೂ ಹೇಳಿದ್ದ ಎನ್ನಲಾಗಿದೆ, ಆದರೆ ಆಕೆ ಕ್ಯಾರೆ ಎಂದಿಲ್ಲ. ಹೀಗಾಗಿ ಮನನೊಂದು ಅನ್ಬರಸನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ.
ಅನ್ಬರಸನ್ ಪೋಷಕರು ಮೊದಲು ಯುಡಿಆರ್ ಪ್ರಕರಣವನ್ನು ದಾಖಲಿಸಿದ್ದರು. ಆದರೆ ಮಗ ಆಕೆಯೊಟ್ಟಿಗೆ ಮಾತನಾಡಿರುವ ಕಾಲ್ ರೆಕಾರ್ಡ್ ಆಧಾರದ ಮೇಲೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಪ್ರಕರಣ ದಾಖಲಿಸಿದ್ದಾರೆ. ಸದ್ಯ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿತ್ರ:ಅನ್ಬರಾಸನ್-ವಿದ್ಯಾ, ಸಂತೋಷ-ವಿದ್ಯಾ