ಶಿಕ್ಷಣ

ಪ್ರಸಕ್ತ ಸಾಲಿನ 10ನೇ ತರಗತಿ ಪರೀಕ್ಷೆ ವೇಳಾಪಟ್ಟಿ ಪ್ರಕಟ 

Views: 92

ಕನ್ನಡ ಕರಾವಳಿ ಸುದ್ದಿ: ಪ್ರಸಕ್ತ ಸಾಲಿನ 10ನೇ ತರಗತಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಯನ್ನು ಮುಂದಿನ ವರ್ಷ 25 ದಿನಗಳ ಅವಧಿಯಲ್ಲಿ ನಡೆಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಉದ್ದೇಶಿಸಿದೆ.

ಈ ಸಂಬಂಧ ಬುಧವಾರ ನವೆಂಬರ್ 27 ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಯಿತು. 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ಈಗಾಗಲೇ ಮಂಡಳಿ ದಿನಾಂಕ ನಿಗದಿಪಡಿಸಿದೆ.

10ನೇ ತರಗತಿ ವಾರ್ಷಿಕ ಪರೀಕ್ಷೆಯು ಮುಂದಿನ ವರ್ಷ ಮಾರ್ಚ್ ತಿಂಗಳ 24 ರಿಂದ ಏಪ್ರಿಲ್ 17ರವರೆಗೆ ನಡೆಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ತಾತ್ಕಾಲಿಕ ವೇಳಾಪಟ್ಟಿ ಸಿದ್ಧಪಡಿಸಿದೆ. ಇಂದು ನಡೆದ ಸಭೆಯಲ್ಲಿ ಪರೀಕ್ಷೆ ಕುರಿತು ಮಹತ್ವದ ವಿಷಯಗಳ ಚರ್ಚಿಸಲಾಗಿದೆ. ದಿನಾಂಕಗಳನ್ನು ಅಂತಿಮಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ಮಾರ್ಚ್ 24 ರಿಂದ ಏಪ್ರಿಲ್ 17ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎಂದು ಸದ್ಯ ಹೇಳಲಾಗುತ್ತಿರುವ ವೇಳಾಪಟ್ಟಿಯು ತಾತ್ಕಾಲಿಕವಾಗಿದೆ. ಇದೇ ಡಿಸೆಂಬರ್ ಮೊದಲು ಇಲ್ಲವೇ ಎರಡನೇ ವಾರ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು (KSEAB) ಅಧಿಕೃತ ವೇಳಾಪಟ್ಟಿ ಬಿಡುಗಡೆ ಮಾಡಲಿದೆ. ಆಗ ಅಭ್ಯರ್ಥಿಗಳು ದಿನಾಂಕ, ಸಮಯ ಪರಿಶೀಲಿಸಬೇಕು.

ತಾತ್ಕಾಲಿಕ ವೇಳಾಪಟ್ಟಿ

ಗಣಿತಶಾಸ್ತ್ರ: 2025 ರ ಮಾರ್ಚ್ 24 (ಸೋಮವಾರ)

ಇಂಗ್ಲೀಷ್ (ದ್ವಿತೀಯ ಭಾಷೆ): 2025 ರ ಮಾರ್ಚ್ 28 (ಶುಕ್ರವಾರ)

ವಿಜ್ಞಾನ: 2025 ರ ಏಪ್ರಿಲ್ 1 (ಮಂಗಳವಾರ)

ಸಮಾಜ ಶಾಸ್ತ್ರ: 2025 ರ ಏಪ್ರಿಲ್ 4 (ಶುಕ್ರವಾರ)

ಕನ್ನಡ( ಮೊದಲ ಭಾಷೆ): 2025 ರ ಏಪ್ರಿಲ್ 7 (ಸೋಮವಾರ)

ಹಿಂದಿ(ತೃತೀಯ ಭಾಷೆ): 2025 ರ ಏಪ್ರಿಲ್ 11 (ಶುಕ್ರವಾರ)

ಮೊದಲ ಭಾಷೆ: ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಇಂಗ್ಲಿಷ್ (ಎನ್‌ಸಿಆರ್‌ಟಿ), ಸಂಸ್ಕೃತ

ದ್ವಿತೀಯ ಭಾಷೆ: ಇಂಗ್ಲಿಷ್, ಕನ್ನಡ.

ತೃತೀಯ ಭಾಷೆ: ಹಿಂದಿ, ಕನ್ನಡ, ಇಂಗ್ಲಿಷ್, ಪರ್ಷಿಯನ್, ಅರೇಬಿಕ್, ತುಳು, ಉರ್ದು, ಸಂಸ್ಕೃತ, ಕೊಂಕಣಿ, ಎನ್‌ಎಸ್‌ಕ್ಯೂಎಫ್ ವಿಷಯಗಳ ಪರೀಕ್ಷೆ ನಡೆಯಲಿದೆ.

Related Articles

Back to top button