ಆರ್ಥಿಕ

ಪ್ಯಾನ್- ಆಧಾರ್ ಕಾರ್ಡ್ ಜೋಡನೆಗೆ ಜೂನ್ 30. ಕಡೆ ದಿನ : ಆದಾಯ ತೆರಿಗೆ ಇಲಾಖೆ ಕಟ್ಟುನಿಟ್ಟಿನ ಸೂಚನೆ

Views: 0

ಪ್ಯಾನ್ ಕಾರ್ಡ್ ಗೆ ಆಧಾರ್ ಜೋಡಿಸುವುದಕ್ಕೆ ಜೂನ್ 30 ಕಡೆ ದಿನ .ಇದುವೇ ನಿಮಗೆ ಕಟ್ಟ ಕಡೆಯ ಅವಕಾಶ.

ನಿಮ್ಮ ಆಧಾರ್ ಮತ್ತು ಪ್ಯಾನ್ ಕಾರ್ಡನ್ನು ಒಂದಕ್ಕೊಂದು ಜೋಡಣೆ ಮಾಡಿಬಿಡಿ. ತಪ್ಪದೆ ಶುಕ್ರವಾರ ತಡ ರಾತ್ರಿಗೆ ಮುನ್ನವೇ ಈ ಪ್ರಕ್ರಿಯೆ ಪೂರ್ಣಗೊಳಿಸಿ. ಇಲ್ಲವಾದರೆ ನಿಮ್ಮ ಪ್ಯಾನ್ ಕಾರ್ಡ್ ರದ್ದಾಗಲಿದೆ ಎಂದು ಆದಾಯ ತೆರಿಗೆ ಇಲಾಖೆ ಕಟ್ಟು ನಿಟ್ಟಿನ ಸೂಚನೆ ನೀಡಿದೆ.

ಸೇವೆಗಳನ್ನು ಪಡೆಯುವುದಕ್ಕೆ ಆಧಾರ್- ಫ್ಯಾನ್ ಜೋಡಣೆ ಕಡ್ಡಾಯವಾಗಿದ್ದು, ಐಟಿಆರ್ ಎಸ್ ಪಡೆಯುವುದಕ್ಕೆ ಆಧಾರ್- ಫ್ಯಾನ್ ಜೋಡಣೆ ಕಡ್ಡಾಯವಾಗಿದ್ದು, ಐಟಿ ಆರ್ ಎಸ್ ಸಲ್ಲಿಸುವುದಕ್ಕೆ ಜೋಡಣೆ ಕಡ್ಡಾಯವಲ್ಲ, ಆದರೆ, ಐಟಿ ಇಲಾಖೆ ಆಧಾರ್ -ಪ್ಯಾನ್ ಕಾರ್ಡ್ ಜೋಡಣೆಯಾಗದೆ ಇದ್ದಲ್ಲಿ ರಿಟರ್ನ್ ಪ್ರಕ್ರಿಯೆಯನ್ನು ಮುಂದುವರಿಸುವುದಿಲ್ಲ.

ನೇರ ತೆರಿಗೆಗಳ ಕೇಂದ್ರ ಮಂಡಳಿ ಹೊರಡಿಸುವ ಸುತ್ತೋಲೆ ಪ್ರಕಾರ ಲಿಂಕ್ ಆಗದೆ ಇದ್ದರೆ ಆದಾಯ ತೆರಿಗೆ ಕಾಯ್ದೆ ನಿಯಮ 114 ಎಎಎ ಪ್ರಕಾರ ಪ್ಯಾನ್ ಕಾರ್ಡ್ ರದ್ದಾಗಲಿದೆ. ಆ ಬಳಿಕ ತಮ್ಮ ಯಾವುದೇ ಬ್ಯಾಂಕ್ ,ಆಸ್ತಿ ವಹಿವಾಟುಗಳಿಗೆ ತೆರಿಗೆ ಪಾವತಿ ಪ್ರಕ್ರಿಯೆಗೆ ಪ್ಯಾನ್ ನಮೂದಿಸಲು ಆಗುವುದಿಲ್ಲ. ಪ್ಯಾನ್ ನಮೂದು ನಿಯಮ ಅನ್ವಯದಿಂದ ಯಾವುದೇ ವಹಿವಾಟುಗಳ ನಡೆಸಲು ಆಗುವುದಿಲ್ಲ. ವಾರ್ಷಿಕ ತೆರಿಗೆ ಲೆಕ್ಕಪತ್ರ ಸಲ್ಲಿಸಲು ಆಗುವುದಿಲ್ಲ.

Related Articles

Back to top button