ಇತರೆ
ಪತಿಯ ಕಾಟಕ್ಕೆ ಬೇಸತ್ತು: ಮೂವರು ಮಕ್ಕಳೊಂದಿಗೆ ಪತ್ನಿ ಆತ್ಮಹತ್ಯೆ

Views: 150
ಕನ್ನಡ ಕರಾವಳಿ ಸುದ್ದಿ: ಗಂಡನ ಕಾಟ ತಾಳಲಾರದೆ ತನ್ನ ಮೂವರು ಮಕ್ಕಳೊಂದಿಗೆ ಗೃಹಿಣಿಯೊಬ್ಬರು ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ರಾಯಬಾಗ ತಾಲ್ಲೂಕಿನ ಚಿಂಚಲಿ ಪಟ್ಟಣದ ಶಾರದಾ ಢಾಲೆ(38) ಎಂಬುವಳೇ ತನ್ನ ಮೂವರು ಮಕ್ಕಳಾದ ಅನುಷಾ(10), ಅಮೃತಾ(14), ಆದರ್ಶ(8) ಜತೆ ಕೃಷ್ಣೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶಾರದಳ ಪತಿ ಅಶೋಕ ಡಾಲೆ(45) ಹೆಂಡತಿ ಮಕ್ಕಳಿಗೆ ಹಿಂಸೆ ಕೊಡುತ್ತಿದ್ದರು.ಎಷ್ಟು ಬುದ್ಧಿಮಾತು ಹೇಳಿದರೂ ಕೇಳುತ್ತಿರಲಿಲ್ಲ. ಇದರಿಂದ ಮನನೊಂದ ಗೃಹಿಣಿ ಮಕ್ಕಳ ಜತೆ ಜೀವನಕ್ಕೆ ಅಂತ್ಯ ಹಾಡಿದ್ದಾರೆ ಎಂದು ಶಂಕಿಸಲಾಗಿದೆ. ಕುಡಚಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಅಶೋಕ ಡಾಲೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.