ಆರೋಗ್ಯ

ಪತಂಜಲಿ ಉತ್ಪನ್ನಗಳಲ್ಲಿ ಔಷಧೀಯ ಗುಣ ಇರುವ ಸುಳ್ಳು ಜಾಹೀರಾತು: ಯೋಗ ಗುರು ಬಾಬಾ ರಾಮ್‌ದೇವ್‌ಗೆ​ ಸುಪ್ರೀಂ ಕೋರ್ಟ್​ ಫುಲ್​ ಗರಂ!

Views: 39

ಪತಂಜಲಿ ಉತ್ಪನ್ನಗಳಲ್ಲಿ ಔಷಧೀಯ ಗುಣ ಇರುವ ಬಗ್ಗೆ ತಪ್ಪು ದಾರಿಗೆಳೆಯುವ ಜಾಹೀರಾತು ಪ್ರಸಾರ ಮಾಡಲಾಗುತ್ತಿದೆ, ಇದರ ವಿರುದ್ಧ ಕ್ರಮ ಕೈಗೊಳ್ಳಲು ಭಾರತೀಯ ವೈದ್ಯಕೀಯ ಸಂಘ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಸುಳ್ಳು, ತಪ್ಪು ದಾರಿಗೆಳೆಯುವ ಜಾಹೀರಾತುಗಳ ವಿರುದ್ಧ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳದ್ದಕ್ಕೆ ಗರಂ ಆಗಿತ್ತು. ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ ಬಾಬಾ ರಾಮ್​ದೇವ್​ ಹಾಗೂ ಆಚಾರ್ಯ ಬಾಲಕೃಷ್ಣಗೆ ನ್ಯಾಯಾಂಗ ನಿಂದನೆ ನೋಟೀಸ್ ಕೂಡ ಜಾರಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ಗೆ ಹಾಜರಾಗಿದ್ದ ಬಾಬಾ ರಾಮ್‌ದೇವ್ ಅವರು ನ್ಯಾಯಾಲಯಕ್ಕೆ ಕ್ಷಮೆಯಾಚಿಸಿದ್ದಾರೆ. ಬೇಷರತ್‌ ಕ್ಷಮೆಯಾಚಿಸಿದರೂ ಒಪ್ಪದ ಸರ್ವೋಚ್ಛ ನ್ಯಾಯಾಲಯ ರಾಮ್‌ದೇವ್​ ಅವರನ್ನು ಹಿಗ್ಗಾಮುಗ್ಗ ತರಾಟೆ ತೆಗೆದುಕೊಂಡಿದೆ. ದೇಶ ಸೇವೆಯ ನೆಪ ಕೊಡಬೇಡಿ ಎಂದು ಕೋರ್ಟ್​ ಗರಂ ಆಗಿದೆ.

ಪಂತಂಜಲಿ ಉತ್ಪನ್ನಗಳು ಸುಳ್ಳು ಸುದ್ದಿ ಮೂಲಕ ಸದ್ದು ಮಾಡಿದರು. ಕೇಂದ್ರ ಸರ್ಕಾರ ಮಾತ್ರ ಈ ಬಗ್ಗೆ ಕಣ್ಣು ಮುಚ್ಚಿಕೊಂಡಿರೋದು ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಮುಂದಿನ ಕ್ರಮ ಎದುರಿಸಲು ಸಿದ್ಧರಾಗಿರಿ ಎಂದು ಸುಪ್ರೀಂಕೋರ್ಟ್ ಬಾಬಾ ರಾಮ್​ ದೇವ್​ಗೆ ಖಡಕ್ ಎಚ್ಚರಿಕೆ ನೀಡಿದೆ.

ಪತಂಜಲಿ ಉತ್ಪನ್ನಗಳ ಜಾಹೀರಾತಿನಲ್ಲಿ ತಪ್ಪು ಹಾಗೂ ಸುಳ್ಳು ಮಾಹಿತಿಯ ಜಾಹೀರಾತು ನೀಡಿ ಸದ್ಯ ಮಾಡಿದುಣ್ಣೋ ಮಾರಾಯ ಅಂತ ಬಾಬಾ ರಾಮದೇವ್​ ಕೋರ್ಟ್​ ಕಟಕಟೆಯಲ್ಲಿ ನಿಲ್ಲುವಂತಾಗಿದೆ.. ಕೇಸ್​ ಸಂಬಂಧ ಏಪ್ರಿಲ್ 10ಕ್ಕೆ ವಿಚಾರಣೆ ನಡೆಸಲು ಸುಪ್ರೀಂ ತೀರ್ಮಾನಿಸಿದ್ದು ಪತಂಜಲಿ ಕಂಪನಿಯ ತಪ್ಪಿಗೆ ಯಾವ ಶಿಕ್ಷೆ ನೀಡಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

Related Articles

Back to top button