ಇತರೆ

ನೇಣು ಬಿಗಿದುಕೊಂಡು ಕಾನ್‌ಸ್ಟೇಬಲ್‌ ಆತ್ಮಹತ್ಯೆ

Views: 1

ಬಳ್ಳಾರಿ: ನಗರದ ಡಿಎಆರ್ ಪೊಲೀಸ್ ಕಾನ್ಸ್​ಟೇಬಲ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ವಿಜಯನಗರದ ಹಗರಿಬೊಮ್ಮನಹಳ್ಳಿಯ ತಾಲೂಕು ಆನೆಕಲ್ ತಾಂಡ ನಿವಾಸಿಯಾಗಿರುವ ಪ್ರಕಾಶ್ ನಾಯ್ಕ್ (25) ಮೃತ ದುರ್ದೈವಿ.

ಇವರನ್ನು ಟ್ರೈನಿಂಗ್‌ಗಾಗಿ ಬೆಂಗಳೂರಿಗೆ ತೆರಳುವಂತೆ ಮೇಲಾಧಿಕಾರಿಗಳು ತಿಳಿಸಿದ್ದರು. ಸಿಸಿಟಿ (ಭಯೋತ್ಪಾದನೆ ನಿಗ್ರಹ ತರಬೇತಿ) ಹೆದರಿ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ.

Related Articles

Back to top button