ನೀಲಿ ಚಿತ್ರಗಳ ತಾರೆ ಲಿಯೋನೆ ಅನುಮಾನಾಸ್ಪದ ಸಾವು

Views: 196
ವಾಷಿಂಗ್ಟನ್: ನೀಲಿ ಚಿತ್ರಗಳ ತಾರೆ ಸೋಫಿಯಾ ಲಿಯೋನೆ ಅನುಮಾನಾಸ್ಪದವಾಗಿ ಅಮೆರಿಕದ ಅಪಾರ್ಟ್‌ಮೆಂಟ್‌ನಲ್ಲಿ (ಮಾ.1) ನಿಧನರಾಗಿದ್ದಾರೆ ಎಂದು ಅವರ ಮಲತಂದೆ ಮೈಕ್ ರೊಮೆರೊ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಸೋಫಿಯಾ ಲಿಯೋನೆ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಕುಟುಂಬಸ್ಥರು ಮಾಹಿತಿ ಹಂಚಿಕೊಂಡಿದ್ದಾರೆ. ಲಿಯೋನೆಗೆ ಕೇವಲ 26 ವರ್ಷ ವಯಸ್ಸಾಗಿತ್ತು. ಇದೀಗ ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
ಸೋಫಿಯಾ ಅವರ ಹಠಾತ್ ನಿಧನಕ್ಕೆ ಕುಟುಂಬ ಆಘಾತಕ್ಕೊಳಗಾಗಿದೆ. ಆದರೆ ಕುಟುಂಬಸ್ಥರು ಸೋಫಿಯಾ ಲಿಯೋನೆ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಹೀಗಾಗಿ ಪೊಲೀಸರು ಹಲವು ವಿಚಾರದಲ್ಲಿ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಸೋಫಿಯಾ ಲಿಯೋನೆ 18ನೇ ವಯಸ್ಸಿನಲ್ಲಿಯೇ ನೀಲಿ ಚಿತ್ರಗಳಲ್ಳಿ ಕಾಣಿಸಿಕೊಳ್ಳಲು ಆರಂಭಿಸಿದ್ದರು.
ಸೋಫಿಯಾ ಲಿಯೋನೆ 1997ರ ಜೂನ್ 10ರಂದು ಅಮೆರಿಕದ ಮಿಯಾಮಿಯಲ್ಲಿ ಜನಿಸಿದರು. ಕಾಗ್ನಿ ಲಿನ್ ಕಾರ್ಟರ್, ಜೆಸ್ಸಿ ಜೇನ್ ಮತ್ತು ಥೈನಾ ಫೀಲ್ಡ್ಸ್ ನಂತರ ಈ ಉದ್ಯಮದಿಂದ ಪ್ರಸಕ್ತ ವರ್ಷ ನಾಲ್ಕನೇ ಮರಣ ಇದಾಗಿದೆ.