ಕರಾವಳಿ

ನಾಳೆ ಮಂಗಳೂರು ಆಟೋರಿಕ್ಷಾ ಬಂದ್

Views: 53

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಅಟೋರಿಕ್ಷಾ ಚಾಲಕ ಮಾಲಕರ ಸಂಘಗಳ ಒಕ್ಕೂಟ   ಪ್ರತಿಭಟನೆಗೆ ಕರೆ ನೀಡಿದೆ.

ಹೀಗಾಗಿ ನಾಳೆ ಮುಂಜಾನೆ ಆರು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ಅಟೋ ರಿಕ್ಷಾಗಳು ರಸ್ತೆಗೆ ಇಳಿಯುವುದು ಅನುಮಾವಾಗಿದೆ. ನಗರದಲ್ಲಿ ಹೆಚ್ಚುತ್ತಿರುವ ಬ್ಯಾಟರಿ ಚಾಲಿ ಅಟೋ ರಿಕ್ಷಗಳು ಹಾಗೂ ಅವುಗಳಿಗೆ ನಿಗದಿ ಮಾಡಿದ ವಲಯದ ಬಗ್ಗೆ ಅಸಮದಾನದ ಹಿನ್ನಲೆಯಲ್ಲಿ ಈ ಬಂದ್‌ಗೆ ಕರೆ ನೀಡಲಾಗಿದೆ. 25-11-2022ರ ಬಳಿಕ ನೋಂದಣಿಯಾದಂತಹ ಬ್ಯಾಟರಿಜಾಲಿತ ಆಟೋರಿಕ್ಷಾಗಳಿಗೆ ವಲಯ-1ರ ಕ್ರಮಸಂಖ್ಯೆ ನೀಡಬಾರದು. ವಲಯ- 1 ಕ್ರಮಸಂಖ್ಯೆ ಇಲ್ಲದ ಯಾವುದೇ ಕಂಪೆನಿಯ ಆಟೋರಿಕ್ಷಾಗಳು ಮಂಗಳೂರು ನಗರ ವ್ಯಾಪ್ತಿಯ ಹೊರಗೆ ಸಂಚರಿಸಬೇಕು ಮತ್ತು ವಲಯ-2ರ ಕ್ರಮಸಂಖ್ಯೆಯನ್ನು ಲಗತ್ತಿಸಬೇಕು. ನಗರದಲ್ಲಿ ಆಟೋರಿಕ್ಷಾ ನಿಲ್ದಾಣಗಳ ಕೊರತೆಯನ್ನು ಸರಿಪಡಿಸಬೇಕು. ಸಿ.ಎನ್.ಜಿ. ಅಥವಾ ಎಲ್.ಪಿ.ಜಿ. ಆಟೋರಿಕ್ಷಾಗಳಲ್ಲಿ ಮಂಗಳೂರು ನಗರದ ಪರವಾನಿಗೆ ಇಲ್ಲದೇ ನಕಲಿ ಆಟೋರಿಕ್ಷಾಗಳ ಹಾವಳಿ ಹೆಚ್ಚಾಗಿದ್ದು ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಪ್ರಸ್ತುತ ಚಾಲ್ತಿಯಲ್ಲಿರುವ ಆಟೋರಿಕ್ಷಾಗಳ ಪರವಾನಿಗೆಯನ್ನು ಬ್ಯಾಟರಿಚಾಲಿತ ಆಟೋರಿಕ್ಷಾಗಳಿಗೆ ವರ್ಗಾಯಿಸಲು ಅವಕಾಶ ನೀಡಬೇಕು.ಹೀಗೇ ಹಲವು ಬೇಡಿಕೆ ಇಟ್ಟುಕೊಂಡು ಈ ಪ್ರತಿಭಟನೆ ನಡೆಸಲಾಗುತ್ತಿದೆ. ಇದರ ಅಂಗವಾಗಿ ಜ್ಯೋತಿ ವೃತ್ತದಿಂದ ಆರ್‌ಟಿಒ ಕಚೇರಿ ವರೆಗೆ ಪ್ರತಿಭಟನಾ ಜಾಥ ಕೂಡಾ ನಡೆಯಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಅಟೋರಿಕ್ಷಾ ಚಾಲಕ ಮಾಲಕರ ಸಂಘಗಳ ಒಕ್ಕೂಟ ತಿಳಿಸಿದೆ.

Related Articles

Back to top button