ಇತರೆ

ನರ್ಸಿಂಗ್ ಕೇರ್‌ನಲ್ಲಿ ಮೇಡ್ ಆಗಿ ಸೇರಿ 28ಲಕ್ಷ  ಚಿನ್ನ ಬೆಳ್ಳಿ ಕಳ್ಳತನ: ಮಹಿಳೆಯರಿಬ್ಬರ ಬಂಧನ

Views: 78

ಬೆಂಗಳೂರು, ಆಕಾಶವಾಣಿಯ ನಿವೃತ್ತ ನಿರ್ದೇಶಕ ಮುನಿಕೃಷ್ಣಪ್ಪ ಅವರ ಮನೆಯಲ್ಲಿ ನರ್ಸಿಂಗ್ ಕೇರ್‌ನಲ್ಲಿ ಮೇಡ್ ಆಗಿ ಕೆಲಸಕ್ಕೆ ಸೇರಿ ಸಂಚು ರೂಪಿಸಿ 28ಲಕ್ಷ ಮೌಲ್ಯದ ಚಿನ್ನ ಬೆಳ್ಳಿ ಕಳ್ಳತನ ಮಾಡಿದ ಮಹಿಳೆ ಸೇರಿ ಇಬ್ಬರು ಖತರ್ನಾಕ್ ಮಹಿಳೆಯರನ್ನು ಜೆಪಿನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಪ್ಪಳ ಮೂಲದ ಮಂಜುಳ ಉಜರತ್(30)ಹಾಗೂ ಕನಕಪುರದ ಮನೆಗೆಲಸದ ಮಹಿಳೆ ಮಹದೇವಮ್ಮ(50) ಬಂಧಿತ ಆರೋಪಿಗಳಾಗಿದ್ದು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬಂಧಿತರಿಂದ 28ಲಕ್ಷ ಮೌಲ್ಯದ 404ಗ್ರಾಂ ಚಿನ್ನಾಭರಣಗಳು 104 ಗ್ರಾಂ ತೂಕದ ಬೆಳ್ಳಿ ವಸ್ತುಗಳನ್ನು ಹಾಗೂ ೪ ವಿದೇಶಿ ಬ್ರಾಂಡ್‌ನ ವಾಚ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.ಜೆ.ಪಿ ನಗರದ ಆಕಾಶವಾಣಿಯ ನಿವೃತ್ತ ನಿರ್ದೇಶಕ ಮುನಿಕೃಷ್ಣಪ್ಪ(90)ಅವರ ಮನೆಯ ಬಾಗಿಲನ್ನು ಮುರಿದು ಸುಮಾರು 31 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಮತ್ತು ೪ ಅಂತರಾಷ್ಟ್ರೀಯ ಬ್ರಾಂಡ್ ವಾಚ್‌ಗಳನ್ನು ಕಳ್ಳತನ ಮಾಡಿದ ದೂರು ದಾಖಲಿಸಿ ಕಾರ್ಯಾಚರಣೆ ಕೈಗೊಂಡ ಜಯನಗರ ಉಪ ವಿಭಾಗದ ಎಸಿಪಿ ನಾರಾಯಣಸ್ವಾಮಿ.ವಿ ನೇತೃತ್ವದ ಜೆ.ಪಿ.ನಗರ ಪೊಲೀಸರು ಖಚಿತವಾದ ಮಾಹಿತಿಯನ್ನು ಆಧರಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮುನಿಕೃಷ್ಣಪ್ಪ ಅವರ ಮನೆಯಲ್ಲಿ ನರ್ಸಿಂಗ್ ಕೇರ್ ಮತ್ತು ಮೇಡ್ ಆಗಿ ಕೆಲಸಕ್ಕೆಂದು ಸೇರಿಕೊಂಡು ಮನೆಯಲ್ಲಿ ಮಾಲೀಕರು ಇಲ್ಲದ ಸಮಯದಲ್ಲಿ ಅಲೇರಾದಲ್ಲಿದ್ದ ಸುಮಾರು 383 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಮತ್ತು 104 ತೂಕದ ಬೆಳ್ಳಿಯ ವಸ್ತುಗಳನ್ನು ಮನೆಗೆಲಸದ ಮಹದೇವಮ್ಮ ಜೊತೆ ಸೇರಿ ಮಂಜುಳ ಉಜರತ್ ಕಳವು ಮಾಡಿ ಪರಾರಿಯಾಗಿದ್ದನ್ನು ಬಾಯ್ಬಿಟ್ಟಿದ್ದಾರೆ ಎಂದು ಹೇಳಿದರು.ಆರೋಪಿಗಳು ಹಿಂದೆ ಕೆಲಸ ಮಾಡುತ್ತಿದ್ದ ಮನೆಗಳಲ್ಲಿ ಕಳವು ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

Related Articles

Back to top button