ನಮ್ಮಿಬ್ಬರ ಮೇಲೆ ಯಾವಾಗ ಬೇಕಾದ್ರು ಅಟ್ಯಾಕ್ ಆಗಬಹುದು..! ಶಾಕಿಂಗ್ ವಿಚಾರ ಬಿಚ್ಚಿಟ್ಟ ಚೈತ್ರಾ ಕುಂದಾಪುರ

Views: 208
ಕನ್ನಡ ಕರಾವಳಿ ಸುದ್ದಿ: ಚೈತ್ರಾ ಕುಂದಾಪುರ ಹಾಗೂ ಶ್ರೀಕಾಂತ್ ಕಶ್ಯಪ್ ಅವರು ಸಂದರ್ಶನವೊಂದರಲ್ಲಿ ನಮ್ಮ ಮೇಲೆ ಯಾವಾಗ ಬೇಕಾದರೂ ಅಟ್ಯಾಕ್ ಆಗಬಹುದು ಎಂಬ ಶಾಕಿಂಗ್ ವಿಚಾರ ಹೇಳಿದ್ದಾರೆ. ಬೆದರಿಕೆಗಳು ತುಂಬಾ ಸಲ ಬಂದಿವೆ. ನಾವಿಬ್ಬರೂ ಅದನ್ನು ತುಂಬಾ ಫನ್ ಆಗಿ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ
ಕಳೆದ ತಿಂಗಳು ಬಹುಕಾಲದ ಗೆಳೆಯನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 12 ವರ್ಷಗಳಿಂದ ಪ್ರೀತಿಸುತ್ತಿದ್ದ ಶ್ರೀಕಾಂತ್ ಕಶ್ಯಪ್ ಎಂಬವರ ಜೊತೆ ಚೈತ್ರಾ ವಿವಾಹವಾಗಿದೆ. ತುಂಬಾ ಸಿಂಪಲ್ ಆಗಿ ನಡೆದಿದ್ದ ಈ ವಿವಾಹಕ್ಕೆ ಬೆರಳಣಿಕೆಯಷ್ಟು ಮಂದಿ ಮಾತ್ರ ಬಂದಿದ್ದರು. ಕೆಲ ಬಿಗ್ ಬಾಸ್ ಸ್ಪರ್ಧಿಗಳು ಆಗಮಿಸಿ ಶುಭ ಹಾರೈಸಿದ್ದರು. ಇದರ ಬೆನ್ನಲ್ಲೇ ಚೈತ್ರಾ ಕುಂದಾಪುರ ಮನೆ ಜಗಳ ಬೀದಿಗೆ ಬಂತು.
ಚೈತ್ರಾ ಹಾಗೂ ಅವರ ತಂದೆ ಬಾಲಕೃಷ್ಣ ನಡುವೆ ಆರೋಪಗಳ ಗುದ್ದಾಟ ನಡೆಯಿತು. ಚೈತ್ರಾ ಅವರ ತಂದೆ, ಮಾಧ್ಯಮದ ಮುಂದೆ ಮಗಳ ಮದುವೆಯನ್ನು ನಾನು ಒಪ್ಪುವುದಿಲ್ಲ. ಚೈತ್ರಾ ಹಾಗೂ ಆಕೆಯ ಪತಿ ಇಬ್ಬರೂ ಕಳ್ಳರು. ನನ್ನ ಪತ್ನಿ ಕೂಡ ಮಗಳ ಬೆಂಬಲಕ್ಕೆ ನಿಂತಿದ್ದಾಳೆ ಎಂದು ಹೇಳಿದ್ದರು.
ಖಾಸಗಿ ಸಂದರ್ಶನವೊಂದರಲ್ಲಿ ಚೈತ್ರಾ ಅವರು ಮುಕ್ತವಾಗಿ ಕೆಲ ವಿಚಾರಗಳನ್ನು ಹಂಚಿಕೊಂಡು ಮೂರ್ನಾಲ್ಕು ವರ್ಷದ ಹಿಂದೆ ತುಂಬಾ ಬೆದರಿಕೆ ಇತ್ತು. ನಮ್ಮಿಬ್ಬರ ಮೇಲೆ ಅಟ್ಯಾಕ್ ಗಳು ಆಗಿವೆ. ಎಷ್ಟೋ ಬಾರಿ ಭಾಷಣಗಳು ಮುಗಿಸಿಕೊಂಡು ಹೋಗಬೇಕಾದರೆ ನಮ್ಮ ಕಾರ್ ಮೇಲೆ ಅಟ್ಯಾಕ್ ಮಾಡಿದ್ದಾರೆ ಎಂದು ಚೈತ್ರಾ ಹೇಳಿದ್ದಾರೆ
ಬಿಗ್ ಬಾಸ್ ಹೋಗಿ ಬಂದ ಬಳಿಕ ಈ ರೀತಿಯ ಅಟ್ಯಾಕ್ ಗಳು ಕೊಂಚ ಕಡಿಮೆ ಆಗಿವೆ. ಈಗ ಸಂಪೂರ್ಣವಾಗಿ ಬಿಟ್ಟು ಬಿಟ್ಟಿದ್ದಾರೆ ಅಂತೆಲ್ಲಾ ಏನಿಲ್ಲಾ. ಯಾವಾಗ ಬೇಕಾದರೂ ಅದು ಆಗಬಹುದು. ಆದರೆ ನಾವಿಬ್ಬರೂ ಅಂದುಕೊಳ್ಳೋದು ಇಷ್ಟೇ, ಬದುಕುವುದು ಇರಬಹುದು ಅಥವಾ ಸಾಯುವುದು ಇರಬಹುದು ಅದು ಭಗವಂತನ ಇಚ್ಛೆ. ಮನುಷ್ಯ ಪ್ಲ್ಯಾನ್ ಮಾಡೋಕಾಗಲ್ಲ ಅಥವಾ ವಿರೋಧಿಗಳು ಪ್ಲ್ಯಾನ್ ಮಾಡೋಕೆ ಆಗಲ್ಲ. ಸ್ಕೆಚ್ ಹಾಕಿ ನಮ್ಮನ್ನು ಕೊಲ್ಲೋಕೆ ಸಾಧ್ಯವೇ ಇಲ್ಲ. ಆಯುಷ್ಯ ತೀರಿದರೆ ನಾವು ಸಾಯ್ತೀವಿ ಎಂದು ಚೈತ್ರಾ-ಶ್ರೀಕಾಂತ್ ಹೇಳಿದ್ದಾರೆ.
ಪೂರ್ವ ನಿರ್ಧರಿತವಾದ ಸಾವಿಗೆ ಹೆದರಿ ನಾವು ಇವತ್ತಿನ ನೆಮ್ಮದಿಯನ್ನು ಕಳೆದುಕೊಳ್ಳುವುದಿಲ್ಲ. ಇವತ್ತು ನಾವು ಚೆನ್ನಾಗಿ ಬದುಕುತ್ತೀವಿ ಎಂದರು.