ನಕಲಿ ಆನ್‌ಲೈನ್ ಪ್ರೊಫೈಲ್ ಮೂಲಕ ಮಹಿಳೆಯರಿಗೆ ವಂಚನೆ: ಆರೋಪಿ ಬಂಧನ

Views: 71
ಬೆಂಗಳೂರು: ಮದುವೆ ತಡವಾಗುತ್ತಿರುವ ಕಾರಣ ಪರಿಹಾರ ಕಂಡುಕೊಳ್ಳಲು ಮುಂದಾದ ಅವಿವಾಹಿತ ಮಹಿಳೆಗೆ ನಕಲಿ ಜ್ಯೋತಿಷಿಗಳು ವಂಚಿಸಿರುವ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ.
ವಿವಾಹಕ್ಕೆ ಸೂಕ್ತ ವರ ಸಿಗದ ಕಾರಣ ಜ್ಯೋತಿಷಿಯನ್ನು ಸಂಪರ್ಕಿಸಿದ್ದಾರೆ. ಒಡಿಶಾ ಮೂಲದ ದಿವ್ಯಾ ವರ್ತೂರಿನ ಗುಂಜೂರಿನ ನಿವಾಸಿಯಾಗಿದ್ದು, ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆರೋಪಿ ಹಾಗೂ ಆತನ ಸಹಚರರು ಗ್ರಹಗಳ ಓಲೈಕೆಗಾಗಿ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳನ್ನು ಮಾಡುವುದಾಗಿ ಹೇಳಿ ಸಂತ್ರಸ್ತೆಗೆ ವಂಚಿಸಿದ್ದಾರೆ.
ತಾವು ಹೇಳುವ ವಿಧಿ ವಿಧಾನಗಳನ್ನು ಮಾಡದಿದ್ದರೆ ಮತ್ತಷ್ಟು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಆರೋಪಿಗಳು ಆಕೆಯನ್ನು ಹೆದರಿಸಿದ್ದಾರೆ. ಅವರು ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಾಗ, ಸಂತ್ರಸ್ತೆಗೆ ಮೋಸ ಹೋಗಿರುವುದು ತಿಳಿಯಿತು. ಬಳಿಕ ಅವರ ಮೊಬೈಲ್ ನಂಬರ್ ಬ್ಲಾಕ್ ಮಾಡಿ ಆರೋಪಿಗಳ ವಿರುದ್ಧ ದಿವ್ಯಾ ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನನಗೆ ಮದುವೆಯಾಗಲು ಸಮಸ್ಯೆ ಇದೆ. ಹೀಗಾಗಿ ನಾನು ಇಂಟರ್‌ನೆಟ್‌ನಲ್ಲಿ ಜ್ಯೋತಿಷಿಗಳನ್ನು ಪರಿಶೀಲಿಸಿದೆ ಮತ್ತು ಪರಮೇಶ್ವರ್ ಪಂಡಿತ್ ಅವರ ಸಂಖ್ಯೆ ಕಂಡುಬಂತು ಫೆಬ್ರವರಿ 25 ರಂದು ಪರಮೇಶ್ವರ್ ಎಂದು ಗುರುತಿಸಲಾದ ಆರೋಪಿಗಳಲ್ಲಿ ಒಬ್ಬನಿಗೆ ಕರೆ ಮಾಡಿದೆ. ನಂತರ, ಲವ್ ಗುರು ಎಂದು ಗುರುತಿಸಲಾದ ಇನ್ನೊಬ್ಬ ವ್ಯಕ್ತಿ ನನ್ನೊಂದಿಗೆ ಮಾತನಾಡಲು ಪ್ರಾರಂಭಿಸಿದನು. ಮದುವೆಯಾಗಲು ನನ್ನ ಗ್ರಹಗತಿ ಸರಿಯಿಲ್ಲ ಎಂದು ಹೇಳಿದರು.
ನನ್ನ ಸಮಸ್ಯೆಯನ್ನು ಪರಿಹರಿಸಲು ಅವರು ನನ್ನನ್ನು ಅಘೋರಿಗಳ ಬಳಿಗೆ ಹೋಗಬೇಕು, ನಾನು ಅಘೋರಿಗಳ ಮುಂದೆ ಕುರಿಯನ್ನು ಬಲಿ ಕೊಡಬೇಕು ಎಂದು ಹೇಳಿದ್ದರು. ನನಗೆ ದೊಡ್ಡ ಸಮಸ್ಯೆಗಳಿವೆ , ಹೀಹಾಗಿ ಹಣ ನೀಡದರೆ ಅವರ ಜೊತೆ ಚರ್ಚಿಸಬಹುದು ಎಂದು ಅವರು ನನ್ನನ್ನು ಮತ್ತಷ್ಟು ಹೆದರಿಸಿದರು.
ನನ್ನ ಜಾತಕದಲ್ಲಿ ಕೆಲವು ಸೈತಾನ ಸಮಸ್ಯೆಗಳಿದ್ದು ಅವುಗಳನ್ನು ಪರಿಹರಿಸಬೇಕು ಎಂದು ಬೆದರಿಕೆ ಹಾಕಿದ್ದಾರೆ’ ಎಂದು ದಿವ್ಯಾ ಹೇಳಿದ್ದಾರೆ. ಫೆಬ್ರವರಿ 29 ರಿಂದ ಮಾರ್ಚ್ 2 ರವರೆಗೆ ಹಂತ ಹಂತವಾಗಿ 42,000 ರೂ.ಗಳನ್ನು ವರ್ಗಾವಣೆ ಮಾಡಿಸಿಕೊಳ್ಳುವಲ್ಲಿ ಇಬ್ಬರೂ ಯಶಸ್ವಿಯಾಗಿದ್ದಾರೆ