ಆರೋಗ್ಯ

ದೇಹದ ಒಳಗೆ ಜಿಂಕ್‌ ಸೇರಿದರೆ ಒಳ್ಳೆಯ ಬಾಡಿ ಬಿಲ್ಡ್‌ ಮಾಡಬಹುದು ಎಂದು 39 ನಾಣ್ಯ, 37 ಮ್ಯಾಗ್ನೆಟ್‌ ನುಂಗಿದ !

Views: 61

ನವದೆಹಲಿ: ಪ್ರತಿಯೊಬ್ಬರೂ ಆರೋಗ್ಯದ ಕುರಿತು ಕಾಳಜಿ ವಹಿಸಬೇಕು, ಬಾಡಿ ಬಿಲ್ಡ್‌ ಮಾಡಿದರೆ ಇನ್ನೂ ಒಳ್ಳೆಯದು ಎಂದು ವೈದ್ಯರು ಸಲಹೆ ನೀಡುತ್ತಾರೆ. ಆದರೆ, ಆರೋಗ್ಯ, ಫಿಟ್‌ನೆಸ್‌, ಬಾಡಿ ಬಿಲ್ಡಿಂಗ್‌ ಬಗ್ಗೆ ಅತಿಯಾದ ಕಾಳಜಿ, ಬೇರೆಯವರು ಹೇಳಿದ್ದನ್ನೆಲ್ಲ ಕೇಳುವ, ಬಾಡಿ ಬಿಲ್ಡ್‌ ಮಾಡಲು ಏನು ಬೇಕಾದರೂ ಮಾಡುವ ಮನಸ್ಥಿತಿ ಹೊಂದಿವರೂ ಇದ್ದಾರೆ. ಇದರಿಂದಾಗಿ ಅವರು ತೊಂದರೆಯನ್ನೂ ಅನುಭವಿಸುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ, ದೆಹಲಿಯಲ್ಲಿ ವ್ಯಕ್ತಿಯೊಬ್ಬ ಬಾಡಿ ಬಿಲ್ಡಿಂಗ್‌ಗಾಗಿ 39 ನಾಣ್ಯಗಳು ಹಾಗೂ 37 ಆಯಸ್ಕಾಂತಗಳನ್ನು ನುಂಗಿದ್ದಾನೆ.

ಹೌದು, ದೇಹದ ಒಳಗೆ ಜಿಂಕ್‌ ಸೇರಿದರೆ ಒಳ್ಳೆಯ ಬಾಡಿ ಬಿಲ್ಡ್‌ ಮಾಡಬಹುದು ಎಂದು ನಂಬಿದ ವ್ಯಕ್ತಿಯು ನಾಣ್ಯ ಹಾಗೂ ಆಯಸ್ಕಾಂತದ ತುಂಡುಗಳನ್ನು ನುಂಗಿದ್ದಾನೆ. ಅದೃಷ್ಟವಶಾತ್‌, ದೆಹಲಿಯ ಸರ್‌ ಗಂಗಾರಾಮ್‌ ಆಸ್ಪತ್ರೆಯ ವೈದ್ಯರು ವ್ಯಕ್ತಿಯ ಹೊಟ್ಟೆಯಿಂದ 39 ನಾಣ್ಯಗಳು ಹಾಗೂ 37 ಮ್ಯಾಗ್ನೆಟ್‌ಗಳನ್ನು ಹೊರತೆಗೆದಿದ್ದಾರೆ. ಶಸ್ತ್ರಚಿಕಿತ್ಸೆಯ ಮೂಲಕ ನಾಣ್ಯಗಳು ಹಾಗೂ ಆಯಸ್ಕಾಂತಗಳನ್ನು ಹೊರತೆಗೆಯಲಾಗಿದ್ದು, ವ್ಯಕ್ತಿಯು ಸುರಕ್ಷಿತವಾಗಿದ್ದಾನೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Related Articles

Back to top button