ಸಹಕಾರಿ ದುರೀಣ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರಿಗೆ ಗಲ್ಫ್ ಕನ್ನಡಿಗರಿಂದ ಸನ್ಮಾನ

Views: 1
ದುಬೈ : ಎಲ್ಲರಿಗೂ ಸಮಾನ ಜೀವನ , ಸಮಾನ ಸಹಭಾಗಿತ್ವ ಎಂಬ ಸಹಕಾರ ಚಳುವಳಿಯ ಧ್ಯೇಯವನ್ನು ಉಸಿರಾಗಿಸಿಟ್ಟುಕೊಂಡು ಕಳೆದ 45 ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ದುಡಿಯುತ್ತಿರುವ ಬಡವರ ಬಂಧು ಡಾ .ಎಂ .ಎನ್ .ರಾಜೇಂದ್ರ ಕುಮಾರ್ ಅವರನ್ನು ಗಲ್ಫ್ ಕನ್ನಡಿಗರ ಒಕ್ಕೂಟ ( ಯುಎಇ ,ಬಹರೇನ್ , ಓಮನ್ ,ಕತಾರ್ , ಕುವೈತ್ ,ಕೆ .ಎಸ್ .ಎ )ಕನ್ನಡಿಗರ ಕನ್ನಡ ಕೂಟ ದುಬೈ ,ಯುಎಇ . ನಮ್ಮ ಕುಂದಾಪ್ರ ಕನ್ನಡ ಬಳಗ ( ಯುಎಇ ,ಬಹರೇನ್ , ಓಮನ್ ,ಕತಾರ್ , ಕುವೈತ್ ,ಕೆ .ಎಸ್ .ಎ ). ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಗಲ್ಫ್ ( ಯುಎಇ ,ಬಹರೇನ್ , ಓಮನ್ ,ಕತಾರ್ , ಕುವೈತ್ ,ಕೆ .ಎಸ್ .ಎ ). ಶಿರೂರು ಅಸ್ಸೊಸಿಯೆಷನ್ ದುಬೈ ಯುಎಇ . ಶ್ರೀ ಗುರು ರಾಘವೇಂದ್ರ ಸೇವಾ ಸಮಿತಿ ಯುಎಇ ಮತ್ತು ಹೆಮ್ಮೆಯ ಕನ್ನಡಿಗರ ಸಂಘ ದುಬೈ ವತಿಯಿಂದ ಜೂನ್ 25 , 2023 ರಂದು ದುಬೈನಲ್ಲಿಆತ್ಮೀಯವಾಗಿ ಸನ್ಮಾನಿಸಲಾಯಿತು .
ಈ ಸಂಧರ್ಭದಲ್ಲಿ ವೇದಿಕೆಯಲ್ಲಿ ಗಲ್ಫ್ ಕನ್ನಡಿಗರ ಒಕ್ಕೂಟದ ಅಧ್ಯಕ್ಷರಾದ ಅಡ್ವೋಕೇಟ್ ಇಬ್ರಾಹೀಮ್ ಖಲೀಲ್ , ಕನ್ನಡಿಗರ ಕನ್ನಡ ಕೂಟ ದುಬೈ ,ಯುಎಇ . ಮತ್ತು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಗಲ್ಫ್ ನ ಅಧ್ಯಕ್ಷರಾದ ಸಾಧನ್ ದಾಸ್ , ಉದ್ಯಮಿ ದಿನೇಶ್ ದೇವಾಡಿಗ , ನಮ್ಮ ಕುಂದಾಪ್ರ ಕನ್ನಡ ಬಳಗದ ಸುಧಾಕರ್ ಪೂಜಾರಿ ಯವರು ಉಪಸ್ಥಿತರಿದ್ದರು .
ರಾಜೇಂದ್ರ ಕುಮಾರ್ ಅವರನ್ನು ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಶಾಲು ಹೊದೆಸಿ , ಫಲಪುಷ್ಪ ಮತ್ತು ಸನ್ಮಾನ ಪತ್ರವನ್ನು ನೀಡಿ ಕೊಲ್ಲಿ ರಾಷ್ಟ್ರಗಳ ಸಮಸ್ತ ಕನ್ನಡಿಗರ ಪರವಾಗಿ ಸನ್ಮಾನಿಸಿದರು.
ಸನ್ಮಾನಕ್ಕೆ ಉತ್ತರವಾಗಿ ಮಾತನಾಡುತ್ತಾ ರಾಜೇಂದ್ರ ಕುಮಾರ್ ಅವರು,”ಇತ್ತೀಚಿಗೆ ದುಬೈನಲ್ಲಿ 16ನೇ ಅಂತರಾಷ್ಟ್ರೀಯ ವ್ಯವಹಾರ ಸಾಧಕ ಪ್ರಶಸ್ತಿ ಸ್ವೀಕರಿಸುವಾಗ ಆದ ಸಂತೋಷದ ದುಪ್ಪಟ್ಟು ಖುಷಿಯನ್ನು ಗಲ್ಫ್ ನ ಕನ್ನಡಿಗರ ಸನ್ಮಾನ ನೀಡಿದೆ . ಈ ಸನ್ಮಾನ ನನ್ನ ಅಂತರಂಗವನ್ನು ತಟ್ಟಿದೆ . ದೇಶದಿಂದ ಹೊರಗೆ ನೆಲೆಸಿದ ನನ್ನದೇ ಊರಿನ , ಮಣ್ಣಿನ ಬಾಂಧವರು ಪ್ರೀತಿಂದ ನೀಡಿದ ಸನ್ಮಾನವನ್ನು ಅಷ್ಟೇ ಗೌರವ ಮತ್ತು ಅಭಿಮಾನದಿಂದ ಸ್ವೀಕರಿಸುತಿದ್ದೇನೆ ಎಂದು ನುಡಿದರು.”
ಈ ಸಂಧರ್ಭದಲ್ಲಿ ತಾಯ್ನಾಡಿನಿಂದ ಆಗಮಿಸಿದ ಗಣ್ಯರಾದ ವಿನಯ್ ಕುಮಾರ್,ರಾಜಾರಾಮ್ ತೆಕ್ಕುಂಜೆ , ಭಾಸ್ಕರ ಕೋಟ್ಯಾನ್ , ವಾದಿರಾಜ ಶೆಟ್ಟಿ ಶಶಿ ಕುಮಾರ ರೈ , ಸದಾಶಿವ ಉಳ್ಳಾಲ್ , ದೇವಿಪ್ರಸಾದ್ ಶೆಟ್ಟಿ , ರಾಜೇಶ್ ರಾವ್ ಪಾಂಗಳ , ಅಶೋಕ್ ಕುಮಾರ್ ಶೆಟ್ಟಿ , ಜಯಕಾರ ಶೆಟ್ಟಿ , ರಾಜು ಪೂಜಾರಿ , ಮಹೇಶ್ ಹೆಗ್ಡೆ , ಎಕ್ಕಾರ್ ಮೋನಪ್ಪ ಶೆಟ್ಟಿ ಕೆದಿಂಜೆ ಜಯರಾಜ್ ರೈ ಕುಂಬ್ಳೆ ಗೋಪಾಲ ಕೃಷ್ಣ ಭಟ್ , ಮತ್ತು ಸುನಿಲ್ ಕುಮಾರ್ ಅವರನ್ನು ಗೌರವಿಸಲಾಯಿತು.
. ಕಾರ್ಯಕ್ರಮವನ್ನು ಖ್ಯಾತ ಅನಿವಾಸಿ ಕನ್ನಡಿಗ ಉದ್ಯಮಿ ವರದರಾಜ್ ಶೆಟ್ಟಿ ಅವರ ರೀಜೆಂಟ ಪ್ಯಾಲೇಸ್ ಹೋಟೆಲ್ ನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು .ಸಾಧನ್ ದಾಸ್ ಸ್ವಾಗತಿಸಿದರು. ಆರತಿ ಅಡಿಗ ಅವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು .