ಇತರೆ

ತೆಕ್ಕಟ್ಟೆ ಮರ ಕಡಿಯುವಾಗ ವ್ಯಕ್ತಿ ಮೇಲೆ ಬಿದ್ದು ಸಾವು

Views: 103

ತೆಕ್ಕಟ್ಟೆ: ಇಲ್ಲಿಗೆ ಸಮೀಪ ತೋಟದಬೆಟ್ಟು ಎಂಬಲ್ಲಿ ಮನೆಯ ಹತ್ತಿರದ ಅಪಾಯ ಸಂಭವಿಸಬಹುದಾದ ಗಾಳಿ ಮರವನ್ನು ಕಡಿಸುತ್ತಿರುವಾಗ ಆಕಸ್ಮಿಕವಾಗಿ ವ್ಯಕ್ತಿಯ ಮೇಲೆ ಮರ ಬಿದ್ದು ಸಾವಿಗೀಡಾದ ಘಟನೆ ಮಾರ್ಚ್ 27ರಂದು ನಡೆದಿದೆ.

ಮೃತರು ಇಲ್ಲಿನ ನಿವಾಸಿ ಶ್ರೀಧರ್ ಮರಕಾಲ(80) ಮೃತರಿಗೆ ಪತ್ನಿ, ನಾಲ್ವರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಕೊಮೆಯ ನಾಗರಾಜ್ ಎಂಬುವವರು ಮರ ಕಡಿಯುತ್ತಿರುವ ಸಂದರ್ಭದಲ್ಲಿ ಅಲ್ಲಿಯೇ ಹತ್ತಿರದಲ್ಲಿ ನಿಂತಿದ್ದ ಶ್ರೀಧರ್ ಮರಕಾಲ ಅವರ ಮೈ ಮೇಲೆ ಬಿದ್ದು ಗಂಭೀರ ಗಾಯಗೊಂಡರು. ಕೂಡಲೇ ತೆಕ್ಕಟ್ಟೆ ಫ್ರೆಂಡ್ಸ್ ನ ಆಂಬುಲೆನ್ಸ್ ಮೂಲಕ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅವರು ಮಾರ್ಗ ಮಧ್ಯದಲ್ಲಿಯೇ ಮತಪಟ್ಟಿದ್ದಾರೆ ಎಂದು ತಿಳಿಯಲಾಗಿದೆ.

ಪ್ರಕರಣ ಕೋಟ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ

Related Articles

Back to top button