ಇತರೆ
ತಂಗಿಯನ್ನು ಉಳಿಸಲು ಬಾವಿಗೆ ಹಾರಿದ್ದ ಅಣ್ಣನು ಸಾವು

Views: 60
ಚಿಂಚೋಳಿ, ಬಾವಿಗೆ ಬಿದ್ದು ಅಣ್ಣ ತಂಗಿ ಸಾವನ್ನಪ್ಪಿರುವ ದಾರುಣ ಘಟನೆ ಚಿಂಚೋಳಿ ತಾಲ್ಲೂಕಿನ ಪಟಪಳ್ಳಿ ಗ್ರಾಮದಲ್ಲಿ ನಡೆದಿದೆ.
ಸಂದೀಪ ತಂದೆ ಸಿದ್ದಪ್ಪ (21) ಮತ್ತು ಆತನ ಸಹೋದರಿ ನಂದಿನಿ ತಂದೆ ಸಿದ್ದಪ್ಪ (18) ಸಾವನ್ನಪ್ಪಿರುವ ದುರ್ದೈವಿಗಳು.
ಪಿಯುಸಿ ಓದು ಮುಗಿಸಿದ್ದ ನಂದಿನಿ ಮನೆಯಲ್ಲಿ ಕುಳಿತಿದ್ದಳು. ಮನೆಯಲ್ಲಿ ಕುಳಿತು ಕಾಲಹರಣ ಮಾಡುವ ಬದಲು ಓದು ಮುಂದುವರಿಸು ಎಂದು ತಂದೆ-ತಾಯಿ ಬುದ್ಧಿವಾದ ಹೇಳಿದಕ್ಕೆ ಬೇಸರಿಸಿಕೊಂಡು ಜ.28 ರಂದು ಮನೆಯ ಸಮೀಪದ ಬಾವಿಗೆ ಜಿಗಿದಿದ್ದಳು. ತಂಗಿಯನ್ನು ಉಳಿಸಲು ಹೋಗಿ ಸಂದೀಪ ಸಹ ಬಾವಿಗೆ ಹಾರಿದ್ದ. ಇಬ್ಬರು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸುದ್ದಿ ತಿಳಿದು ಚಿಂಚೋಳಿ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಬಾವಿಯಿಂದ ಇಬ್ಬರ ಶವಗಳನ್ನು ಹೊರತೆಗೆದಿದ್ದಾರೆ. ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.