ರಾಜಕೀಯ

ಟಿಕೆಟ್‌ ಗಾಗಿ ಮುಸುಕಿನ ಗುದ್ದಾಟ,ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಯಡಿಯೂರಪ್ಪ ಆಪ್ತ ಎಂಪಿ ರೇಣುಕಾಚಾರ್ಯ ಸ್ಪರ್ಧೆ?

Views: 19

ವಿಧಾನಸಭಾ ಚುಣಾವಣೆಯಲ್ಲಿ ಹೀನಾಯವಾಗಿ ಹೊನ್ನಾಳಿ ಕ್ಷೇತ್ರದಿಂದ ಸೋಲು ಕಂಡ ಬಿಜೆಪಿ ನಾಯಕ ಎಂ ಪಿ ರೇಣುಕಾಚಾರ್ಯ ಅವರು ಇದೀಗ ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿದ್ದಾರೆ.

ಹೌದು, ದಾವಣಗೆರೆಯಲ್ಲಿ ಇಷ್ಟು ದಿನ ಸಂಸದ ಜಿ.ಎಂ.ಸಿದ್ದೇಶ್ವರಿಗೆ ಮುಳುವಾಗಿದ್ದ ಶಾಮನೂರು ಕುಟುಂಬಕ್ಕೆ ಸ್ವಪಕ್ಷ ಬಿಜೆಪಿಯ ಎಂಪಿ ರೇಣುಕಾಚಾರ್ಯರೇ ಮಗ್ಗಲು ಮುಳುವಾಗಿದ್ದಾರೆ. ಈಗಾಗಲೇ ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ನಾನು ಸಹ ಲೋಕಸಭಾ ಚುನಾವಣೆಯ ಪ್ರಬಲ ಟಿಕೆಟ್‌ ಆಕಾಂಕ್ಷಿ ಎಂದು ಬಹಿರಂಗವಾಗಿ ಬೇಡಿಕೆ ಇಟ್ಟಿದ್ದ ಎಂ ಪಿ ರೇಣುಕಾಚಾರ್ಯ ಅವರು ಲೋಕಸಮರಕ್ಕೆ ಸಜ್ಜಾಗಿದ್ದಾರೆ

ಈಗಾಗಲೇ ಹಾಲಿ ಬಿಜೆಪಿ ಸಂಸದರಾಗಿರುವ ಜಿ ಎಂ ಸಿದ್ದೇಶ್ವರ್‌ ಹಾಗೂ ಎಂ ಪಿ ರೇಣುಕಾಚಾರ್ಯ ನಡುವೆ ಟಿಕೆಟ್‌ ಗಾಗಿ ಮುಸುಕಿನ ಗುದ್ದಾಟ ತಾರಕಕ್ಕೇರಿದ್ದು, ದಾವಣಗೆರೆಯಲ್ಲಿ ಸಂಸದರ ವಿರುದ್ಧ ಬಿಜೆಪಿಯ ಹಲವು ಮಂದಿ ತಂಡ ಕಟ್ಟಿಕೊಂಡಿದ್ದಾರೆ. ಅಲ್ಲದೇ ಮಾಜಿ ಶಾಸಕ ಎಸ್.ಆರ್.ರವೀಂದ್ರನಾಥ್, ಮಾಡಾಳ್ ವಿರೂಪಾಕ್ಷಪ್ಪ, ಮುಖ್ಯ ಸಚೇತಕ ಶಿವಯೋಗಿ ಸ್ವಾಮಿ ಪ್ರತ್ಯೇಕವಾಗಿದ್ದು, ಇಷ್ಟು ಜನರನ್ನು ಮಾಜಿ ಶಾಸಕ ರೇಣುಕಾಚಾರ್ಯ ಭೇಟಿಯಾಗಿ ಸಂಸದರ ವಿರೋಧಿ ಪಡೆ ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.

ಇನ್ನೂ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯರಾದ ಬಿ ಎಸ್‌ ಯಡಿಯೂರಪ್ಪ ಅವರ ಜೊತೆಗೆ ಉತ್ತಮ ಸಂಬಂಧ ಹೊಂದಿರುವ ಎಂ ಪಿ ರೇಣುಕಾಚಾರ್ಯ ಅವರು, ಪದೇ ಪದೆ ಬಿಎಸ್‌ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಬಿ ವೈ ವಿಜಯೇಂದ್ರ ಅವರ ಪರ ಬ್ಯಾಟಿಂಗ್‌ ಬಿಸುತ್ತಿರುತ್ತಾರೆ.

ಬಿಜೆಪಿ ಹೈಕಮಾಂಡ್ ಈಗಾಗಲೇ ಕರ್ನಾಟಕದಲ್ಲಿರುವ ತನ್ನ ಹಾಲಿ ಸಂಸದರಲ್ಲಿ ಕೆಲವರಿಗೆ ಟಿಕೆಟ್ ನೀಡದೇ ಹೊಸ ಮುಖಗಳಿಗೆ ಟಿಕೆಟ್‌ ನೀಡುವ ಲೆಕ್ಕಾಚಾರವನ್ನು ಹಾಕಿಕೊಂಡಿದೆ. ಈಗಾಗಲೇ ಈ ಮಾದರಿಯನ್ನು ವಿಧಾನಸಭಾ ಚುನಾವಣೆಯಲ್ಲಿ ತಂದಿದ್ದಾರೆ. ಅದರಂತೆ ವಯೋಮಿತಿಯ ಆಧಾರದ ಮೇಲೆ ಹಾಗೂ ಮುಂದಿನ ತಲೆಮಾರಿನ ನಾಯಕರನ್ನು ಬೆಳೆಸುವ ಅನಿವಾರ್ಯತೆ ದೃಷ್ಟಿಯಿಂದ ಕೆಲವು ಹಾಲಿ ಸಂಸದರಿಗೆ ಟಿಕೆಟ್ ನೀಡದಿರಲು ನಿರ್ಧರಿಸಿದೆ ಎಂದು ಹೇಳಲಾಗಿದ್ದು, ದಾವಣಗೆರೆಯ ಹಾಲಿ ಸಂಸದರಾದ ಜಿ ಎಂ ಸಿದ್ದೇಶ್ವರ್‌ ಅವರಿಗೆ ಟಿಕೆಟ್‌ ಸಿಗುವುದು ಡೌಟ್‌ ಎನ್ನಲಾಗಿದೆ.

ಇನ್ನೂ ಚುನಾವಣೆ ಸಮೀಪಿಸುತ್ತಿದ್ದಂತೆ ದಾವಣಗೆರೆಯಲ್ಲಿ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಂಸದ ಎಂಪಿ ಸಿದ್ದೇಶ್ ಜತೆ, ಮಾಜಿ ಶಾಸಕ ಗುರುಸಿದ್ದಗೌಡ ಮಗ ಆರೈಕೆ ಆಸ್ಪತ್ರೆ ಡಾ.ರವಿ, ಆರ್‌ಎಸ್‌ಎಸ್ ಹಿಂಬಾಲಕ ಕೊಟ್ರೇಶ್, ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಕೂಡ ಆಕಾಂಕ್ಷಿಗಳಿದ್ದಾರೆ. ಇಷ್ಟು ಜನ ಆಕಾಂಕ್ಷಿಗಳ ಪೈಕಿ ಮಾಜಿ ಸಚಿವರಾದ ಎಂ ಪಿ ರೇಣುಕಾಚಾರ್ಯ ಅವರ ಹೆಸರು ಮುನ್ನೆಲೆಗೆ ಬಂದಿದ್ದು, ಟಿಕೆಟ್‌ ವಿಚಾರವಾಗಿ ಬಿ ಎಸ್ ಯಡಿಯೂರಪ್ಪ ಅವರ ಜೊತೆಗೆ ಎಂ ಪಿ ರೇಣುಕಾಚಾರ್ಯ ಅವರು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.‌

ಒಟ್ಟಿನಲ್ಲಿ ದಾವಣಗೆರೆ ಲೋಕಸಭಾ ಚುನಾವನೆಗಾಗಿ ಇಬ್ಬರು ನಾಯಕರ ನಡುವೆ ತೀವ್ರ ಪೈಪೋಟಿ ಸೃಷ್ಟಿಯಾಗಿದ್ದು, ಯಡಿಯೂರಪ್ಪ ಅವರ ಬಣದಲ್ಲಿ ಗುರುತಿಸಿಕೊಂಡಿರುವ ಎಂ ಪಿ ರೇಣುಕಾಚಾರ್ಯ ಅವರಿಗೆ ಟಿಕೆಟ್‌ ಸಿಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗಿದೆ.

Related Articles

Back to top button