ಯುವಜನ

ಜ.12 ರಂದು ಶಿವಮೊಗ್ಗದಲ್ಲಿ “ಯುವ ನಿಧಿ”ಗೆ ಚಾಲನೆ ಅದೇ ದಿನ ಖಾತೆಗೆ ಬರುತ್ತೆ ಹಣ!

Views: 27

ಶಿವಮೊಗ್ಗ: ಕಾಂಗ್ರೆಸ್​ ಸರ್ಕಾರ ಚುನಾವಣೆಗೂ ಮುನ್ನ ಘೋಷಣೆ ಮಾಡಿದ್ದ 5 ಗ್ಯಾರಂಟಿ ಯೋಜನೆಗಳಲ್ಲಿ 4 ಯೋಜನೆಗಳನ್ನು ಈಗಾಗಲೇ ಜಾರಿ ಮಾಡಿದೆ. ಇದೀಗ ಬಾಕಿ ಉಳಿದುಕೊಂಡಿರುವ 5ನೇ ಯೋಜನೆಯಾದ ಯುವನಿಧಿಗೂ ಚಾಲನೆ ನೀಡಲು ಸಜ್ಜಾಗಿದೆ. ಇದೇ 12ರಂದು ಶಿವಮೊಗ್ಗದಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಮೊದಲ ಕಂತಿನ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ವೈದ್ಯಕೀಯ ಹಾಗೂ ಕೌಶ್ಯಲಾಭಿವೃದ್ಧಿ ಸಚಿವ ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ರಾಜ್ಯ ಸರ್ಕಾರದ 5ನೇ ಗ್ಯಾರಂಟಿಗೆ ಜನವರಿ 12 ರಂದು ಚಾಲನೆ ನೀಡುತ್ತಿದ್ದೇವೆ. ಸ್ವಾಮಿ ವಿವೇಕಾನಂದರ ಜನ್ಮ ದಿನದಂದು 5ನೇ ಗ್ಯಾರಂಟಿ ಯುವನಿಧಿ ಲಾಂಚ್ ಆಗುತ್ತಿದೆ. ಸಿಎಂ, ಡಿಸಿಎಂ, ಸಚಿವರು ಎಲ್ಲರೂ ಕೂಡ ಬರ್ತಾರೆ. ಶಿವಮೊಗ್ಗದ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಅಧಿಕ ಯುವಕರು ಸೇರಲಿದ್ದಾರೆ. ಈ ಕಾರಣದಿಂದ ಶಿವಮೊಗ್ಗದ ಫ್ರೀಡಂ ಪಾರ್ಕ್ ನಲ್ಲಿ ಸ್ಥಳ ಪರಿಶೀಲನೆ ಮಾಡಿದ್ದೇವೆ. ಸಚಿವರಾದ ಮಧು ಬಂಗಾರಪ್ಪ, ಎಂಸಿ ಸುಧಾಕರ್, ಶಾಸಕರಾದ ಬೇಳೂರು ಗೋಪಾಲಕೃಷ್ಣ ಪರಿಶೀಲನೆ ಬಳಿಕ ಡಿಸಿ ಕಚೇರಿಯಲ್ಲಿ ಸಭೆ ನಡೆಸಿ, ಸೂಚನೆ ನೀಡುತ್ತೇವೆ ಎಂದು ತಿಳಿಸಿದ್ದಾರೆ.

ಡಿಸೆಂಬರ್ 26ರಿಂದ ಯುವನಿಧಿ ಯೋಜನೆಗೆ ನೋಂದಣಿ ಶುರುವಾಗಿತ್ತು. ನಿನ್ನೆವರೆಗೆ ಸುಮಾರು 25 ಸಾವಿರ ನೊಂದಣಿ ಆಗಿದೆ. ಡಿಪ್ಲೊಮಾವ ಹಾಗೂ ಪದವೀಧರರಿಗೆ ಜನವರಿ 12ರಂದು ನೇರವಾಗಿ ಅವರ ಖಾತೆಗೆ ಹಣ ಹಾಕುತೇವೆ. ಈ ಯೋಜನೆ ಆನ್​ ಗೋಯಿಂಗ್ ಪ್ರೋಸಸ್​ ಆಗಿದ್ದು, ನೋಂದಣಿ ನಿರಂತರವಾಗಿ ನಡೆಯುತ್ತಿರುತ್ತದೆ ಎಂದು ಪಾಟೀಲ್ ತಿಳಿಸಿದ್ದಾರೆ.

ಸದ್ಯ 25 ಸಾವಿರ ಯುವಜನರು ನೋಂದಣಿ ಮಾಡಿಸಿದ್ದಾರೆ. ಇನ್ನೂ ಹೆಚ್ಚು ನೋಂದಣಿ ಮಾಡಿಸಿ ಯೋಜನೆಯನ್ನು ಸದುಪಯೋಗಿಸಿಕೊಳ್ಳಬೇಕು ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದ್ದೇವೆ. ಕೌಶಲ್ಯಾಭಿವೃದ್ಧಿ ಇಲಾಖೆ ಈಗಾಗಲೇ ಸಿದ್ಧತೆ ನಡೆಸಿದೆ. ಕಾರ್ಯಕರ್ತರು ನಿರುದ್ಯೋಗಿ ಯುವಕರ ಗಮನಕ್ಕೆ ತನ್ನಿ, ಯುವಕರಲ್ಲಿ ನಾವು ಪದವಿ ಮುಗಿಸಿದರು ಪೋಷಕರಿಗೆ ಭಾರವಾಗಿದ್ದೇವೆ ಎಂಬ ಆತಂಕ ಬೇಡ ಎಂದರು.

Related Articles

Back to top button