ಜನಮನ

ಜೀವವಿರುವವರೆಗೂ ಶಿಕ್ಷೆ ನೀಡುವ ಅಧಿಕಾರ ವಿಚಾರಣಾ ನ್ಯಾಯಾಲಯಕ್ಕಿಲ್ಲ

Views: 0

ಕೊಲೆ ಪ್ರಕರಣವೊಂದರಲ್ಲಿ ಜೀವವಿರುವವರೆಗೂ ಜೈಲು ಶಿಕ್ಷೆಗೆ ಗುರಿಯಾಗುವ ವ್ಯಕ್ತಿಗೆ ಹೈಕೋರ್ಟ್ ಜೀವಾವಧಿ ಶಿಕ್ಷೆಯಾಗಿ ಮಾರ್ಪಡಿಸಿದೆ.

ಕೊಲೆ ಆರೋಪದಲ್ಲಿ ಜೀವ ಇರುವವರೆಗೂ ಜೈಲಿನಲ್ಲಿ ಶಿಕ್ಷೆ ವಿಧಿಸಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹಾಸನ ಜಿಲ್ಲೆಯ ದ್ಯಾಪನಹಳ್ಳಿಯ ನಿವಾಸಿ ಹರೀಶ್ ಮತ್ತು 3 ವರ್ಷದ ಶಿಕ್ಷೆ ಗುರಿಯಾಗಿದ್ದ ಲೋಕೇಶ್ ಎಂಬುವವರು ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ .ಸೋಮಶೇಖರ್ ಮತ್ತು ನ್ಯಾಯಮೂರ್ತಿ ಕೆ. ರಾಜೇಶ್ ರೈ ಅವರಿಂದ ನ್ಯಾಯಪೀಠ ಆದೇಶಿಸಿದೆ.

ಕ್ರೈಂ, ಕ್ರಿಮಿನಲ್ ಮತ್ತು ಅತ್ಯಂತ ಅಪರೂಪದ ಕೃತ್ಯದ ಬಗ್ಗೆ ಪರೀಕ್ಷೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ ಈ ಪ್ರಕರಣದಲ್ಲಿ ಕ್ರೈಂ ಮತ್ತು ಕ್ರಿಮಿನಲ್ ಪರೀಕ್ಷೆ ತೃಪ್ತಿಕರವಾಗಿದೆ. ಆದರೆ ಅತ್ಯಂತ ಅಪರೂಪದ ಕೃತ್ಯ ಎಂಬುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ಸಾಕ್ಷಾಧಾರಗಳನ್ನು ಒದಗಿಸಲು ವಿಫಲವಾಗಿದೆ ಎಂದು ಪೀಠ ತಿಳಿಸಿದೆ.

ಕೇಂದ್ರ ಸರ್ಕಾರದ ವಿರುದ್ಧ ವಿ. ಶ್ರೀಹರನ್ ಅಲಿಯಾಸ್, ಮುರುಗನ್ ಮತ್ತು ಇತರ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಉಲ್ಲೇಖಿಸಿರುವ ಹೈಕೋರ್ಟ್ ಅಪರಾಧಿಯೊಬ್ಬರಿಗೆ ಜೀವವಿರುವವರೆಗೂ ಶಿಕ್ಷೆ ನೀಡುವಂತಹ ವಿಶೇಷ ಆದೇಶವನ್ನು ಹೈಕೋರ್ಟ್, ಸುಪ್ರೀಂ ಕೋರ್ಟ್ ಮಾತ್ರ ನೀಡಬಹುದಾಗಿದೆ. ಆದರೆ ವಿಚಾರಣಾ ನ್ಯಾಯಾಲಯಕ್ಕೆ ಈ ರೀತಿಯ ಶಿಕ್ಷೆ ನೀಡುವ ಅಧಿಕಾರವಿಲ್ಲ ಎಂದು ಹೇಳಿದೆ.

ಆರೋಪಿ ಹರೀಶ್ ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಜೀವವಿರುವ ವರೆಗೂ ಶಿಕ್ಷೆ ನೀಡಿರುವುದು ಕಾನೂನಿನ ಪ್ರಕಾರ ಸರಿಯಾದ ಕ್ರಮವಲ್ಲ ಅಲ್ಲದೆ ಈ ರೀತಿಯ ಪ್ರಕರಣಗಳಲ್ಲಿ ಸೆಷನ್ ನ್ಯಾಯಾಲಯ ಜೀವವಿರುವ ವರೆಗೂ ಶಿಕ್ಷೆ ನೀಡುವ ಅಧಿಕಾರವನ್ನು ಚಲಾಯಿಸುವ ಅವಕಾಶ ಇಲ್ಲ ಎಂದು ಪೀಠ ಹೇಳಿದೆ.

Related Articles

Back to top button