ಜನಮನ

ಜನವರಿ ತಿಂಗಳ ವಿದ್ಯುತ್ ಬಿಲ್‌ ದರದಲ್ಲಿ ಇಳಿಕೆ 

Views: 64

ಮಂಗಳೂರು: ನವೆಂಬರ್ ತಿಂಗಳಲ್ಲಿ ಇಂಧನ ಮತ್ತು ವಿದ್ಯುತ್‌ ಖರೀದಿ ಹೊಂದಾಣಿಕೆ ವೆಚ್ಚ (ಎಫ್‌ಪಿಪಿಸಿಎ) ಇಳಿಕೆ ಆಗಿರುವ ಕಾರಣ ರಾಜ್ಯದ ಎಲ್ಲ ಎಸ್ಕಾಂಗಳು(ವಿದ್ಯುತ್‌ ಸರಬರಾಜು ಕಂಪನಿ) ಗ್ರಾಹಕರಿಗೆ ಜನವರಿ ತಿಂಗಳಲ್ಲಿ ನೀಡುವ ವಿದ್ಯುತ್ ಬಿಲ್‌ನಲ್ಲಿ ಪ್ರತಿ ಯೂನಿಟ್‌ಗೆ 3 ಪೈಸೆಯಿಂದ 51 ಪೈಸೆವರೆಗೂ ಕಡಿತಗೊಳಿಸಲು ನಿರ್ಧರಿಸಿವೆ.

ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ(ಬೆಸ್ಕಾಂ) ಪ್ರತಿ ಯೂನಿಟ್‌ಗೆ 37 ಪೈಸೆಯನ್ನು ಕಡಿತಗೊಳಿಸುವುದಾಗಿ ತಿಳಿಸಿದೆ. ಗುಲ್ಬರ್ಗಾ ವಿದ್ಯುತ್‌ ಸರಬರಾಜು ಕಂಪನಿ (ಜೆಸ್ಕಾಂ), ಪ್ರತಿ ಯೂನಿಟ್‌ಗೆ 51 ಪೈಸೆ, ಹೆಸ್ಕಾಂ ವ್ಯಾಪ್ತಿಯಲ್ಲಿ 3 ಪೈಸೆ, ಸೆಸ್ಕ್ ವ್ಯಾಪ್ತಿಯಲ್ಲಿ 39 ಪೈಸೆ ಮತ್ತು ಮೆಸ್ಕಾಂ ವ್ಯಾಪ್ತಿಯಲ್ಲಿ 31 ಪೈಸೆ ಕಡಿತಗೊಳಿಸುವುದಾಗಿ ಆಯಾ ಕಂಪನಿಗಳು ತಿಳಿಸಿವೆ.

ಡಿಸೆಂಬರ್ ತಿಂಗಳಲ್ಲಿ ಗ್ರಾಹಕರು ಬಳಸಿದ ಗೃಹ ಬಳಕೆ, ವಾಣಿಜ್ಯ ಸೇರಿದಂತೆ ಎಲ್ಲ ವಿಧದ ವಿದ್ಯುತ್ ಶುಲ್ಕದ ಮೇಲೆ ಪ್ರತಿ ಯೂನಿಟ್‌ಗೆ ಮೇಲೆ ತಿಳಿಸಿರುವಷ್ಟು ಹಣವನ್ನು ಆಯಾ ಕಂಪನಿಗಳು ಕಡಿತಗೊಳಿಸುತ್ತವೆ.

ರಾಜ್ಯ ಸರ್ಕಾರದ ‘ಗೃಹ ಜ್ಯೋತಿ’ಯೋಜನೆಯಡಿ ಉಚಿತವಾಗಿ 200 ಯೂನಿಟ್‌ ವಿದ್ಯುತ್ ಬಳಸುವ ಗ್ರಾಹಕರಿಗೆ ಇದರಿಂದ ಪ್ರಯೋಜನವಾಗುವುದಿಲ್ಲ. 200 ಯೂನಿಟ್‌ಗಿಂತ ಹೆಚ್ಚು ವಿದ್ಯುತ್ ಬಳಸುವ ಗೃಹಬಳಕೆ ಹಾಗೂ ವಾಣಿಜ್ಯ ಬಳಕೆದಾರರಿಗೆ ಸ್ವಲ್ಪ ಮಟ್ಟಿಗೆ ಅನುಕೂಲವಾಗಲಿದ

Related Articles

Back to top button