ಇತರೆ

ಪತಿ ಗಗನಸಖಿಯರ ಜೊತೆ ಅಕ್ರಮ ಸಂಬಂಧ: ಅಸ್ಮಾ ಆತ್ಮಹತ್ಯೆ!

Views: 163

ಕನ್ನಡ ಕರಾವಳಿ ಸುದ್ದಿ: ಅಸ್ಮಾ ಅಸಹಜ ಸಾವು ಪ್ರಕರಣದಲ್ಲಿ ಆರೋಪಿತ ಪತಿ ಬಷೀರ್ ವುಲ್ಲಾನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೇಸ್ ದಾಖಲಿಸಿಕೊಂಡು ತನಿಖೆ ನಡೆಸ್ತಿರುವ ಹೆಬ್ಬಾಳ ಪೊಲೀಸರು, ಬಷೀರ್ ಹಾಗೂ ಮೃತ ಅಸ್ಮಾರ ಮೊಬೈಲ್, ಲ್ಯಾಪ್ಟಾಪ್ ವಶಕ್ಕೆ ಪಡೆದಿದ್ದಾರೆ. ಇನ್ನು ತನಿಖೆ ನಡೆಸ್ತಿರುವ ಪೊಲೀಸ್ ಅಧಿಕಾರಿಗಳಿಗೆ ಅಸ್ಮಾ ಲ್ಯಾಪ್ಟಾಪ್ನಲ್ಲಿ ಪತಿಯ ರಾಸಲೀಲೆಗಳು ಸಿಕ್ಕಿವೆ ಎನ್ನಲಾಗಿದೆ.

ಇದೀಗ ಬಷೀರ್ಗೆ ಸಂಬಂಧಿಸಿದ ಅಶ್ಲೀಲ ವಿಡಿಯೋಗಳು ಲ್ಯಾಪ್ಟಾಪ್ನಲ್ಲಿ ಇವೆ ಎಂದು ಹೇಳಲಾಗಿದೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲೂ ಆರೋಪಿ ಹಲವು ಯುವತಿಯರ ಜೊತೆ ರಿಲೇಷನ್ಶಿಪ್ನಲ್ಲಿ ಇರೋದು ಬೆಳಕಿಗೆ ಬಂದಿದೆ. ಸದ್ಯ ಆರೋಪಿ ಬಷೀರ್ ವುಲ್ಲ ನ್ಯಾಯಾಂಗ ಬಂಧನದಲ್ಲಿದ್ದಾನೆ. ಅಸ್ಮಾ ಮರಣೋತ್ತರ ಪರೀಕ್ಷೆ ರಿಪೋರ್ಟ್ ಬಂದ ಬಳಿಕ ಆರೋಪಿಯನ್ನು ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಏನಿದು ಪ್ರಕರಣ..?

ಕಳೆದ ವರ್ಷ 2023ರ ಜುಲೈನಲ್ಲಿ ವಿಜಯನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಬಾಹರ್ ಅಸ್ಮಾ ಹಾಗೂ ಬಷೀರ್ ವುಲ್ಲಾ ವಿವಾಹ ನಡೆದಿತ್ತು. ಕುಟುಂಬದ ಹಿರಿಯರು ನಿಶ್ವಯಿಸಿದ ಮದುವೆ ಇದಾಗಿತ್ತು. ಪತಿ ಬಷೀರ್ ವುಲ್ಲ ಸುಲ್ತಾನ್ ಪಾಳ್ಯದ ನಿವಾಸಿಯಾಗಿದ್ದ. ಬಾಹರ್ ಅಸ್ಮಾ ಬಾಪೂಜಿನಗರ ಶ್ಯಾಮಣ್ಣ ಗಾರ್ಡನ್ ನಿವಾಸಿಯಾಗಿದ್ದಳು. ಮೃತ ಬಾಹರ್ ಅಸ್ಮಾ ಎಂ.ಎ ಪದವಿಧರೆ. ಈಕೆಯ ಪತಿ ಬಷೀರ್ ವುಲ್ಲ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಖಾಸಗಿ ಏರ್ಲೈನ್ಸ್ ಸಿಬ್ಬಂದಿಯಾಗಿದ್ದ. ಏರ್ ಲೈನ್ಸ್ನ ಕ್ರೂ ಮೆಂಬರ್ಸ್ಗೆ ಟ್ರೈನಿಂಗ್ ಕೊಡುವ ಕೆಲಸ ಮಾಡ್ತಿದ್ದ. ಈ ಖಾಸಗಿ ಏರ್ಲೈನ್ಸ್ನ ಮಹಿಳಾ ಸಿಬ್ಬಂದಿ ಹಾಗೂ ಗಗನಸಖಿಯರ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತಿದ್ದ ಅಸ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತಾ ಆಕೆಯ ಪೋಷಕರು ಆರೋಪಿಸಿದ್ದಾರೆ.

Related Articles

Back to top button