ಇತರೆ
ಗಂಡನ ಬಿಟ್ಟು ಅಕ್ರಮ ಸಂಸಾರ: ರೊಚ್ಚಿಗೆದ್ದ ಪತಿ ಪತ್ನಿಯ ಕತ್ತು ಕೊಯ್ದು ಕೊಲೆ

Views: 0
ಗಂಡನ ಬಿಟ್ಟು ಪ್ರಿಯಕರನ ಜೊತೆ ಪರಾರಿಯಾಗಿದ್ದ ಪತ್ನಿಯನ್ನು ಗಂಡ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
ಕೊಲೆಯಾದ ಗ್ರಹಿಣಿ ಭಾರತಿ (27) ಈಕೆ ಇತ್ತೀಚಿಗೆ ಪತಿ ಹರೀಶನನ್ನು ತ್ಯಜಿಸಿ ಮಗುವಿನೊಂದಿಗೆ ಅದೇ ಗ್ರಾಮದ ಗಂಗರಾಜನೆಂಬ ವ್ಯಕ್ತಿಯೊಂದಿಗೆ ಅಕ್ರಮವಾಗಿ ಸಂಸಾರ ನಡೆಸುತ್ತಿದ್ದಳು.
ಅವರ ವಿಳಾಸ ತಿಳಿದುಕೊಂಡ ಹರೀಶ್ ಮನೆಗೆ ತೆರಳಿ ಹೆಂಡತಿಯೊಂದಿಗೆ ಜಗಳ ತಾರಕಕ್ಕೇರಿ ಪತ್ನಿಯ ಕತ್ತನ್ನು ಕೊಯ್ದು ಕೊಲೆ ಮಾಡಿ ಮಗುವನ್ನು ಎತ್ತಿಕೊಂಡು ಬಂದಿದ್ದಾನೆ.
ಸ್ಥಳದಲ್ಲಿದ್ದ ಗಂಗರಾಜ್ ನಾನೇ ಭಾರತಿಯ ಗಂಡ ಎಂದು ಹೇಳಿದ್ದು, ಸ್ವಲ್ಪ ಹೊತ್ತು ಸಾರ್ವಜನಿಕರಲ್ಲಿ ಗೊಂದಲಮಯ ವಾತಾವರಣ ನಿರ್ಮಾಣವಾಗಿತ್ತು.
ತನಿಖೆಯ ವೇಳೆ ಭಾರತಿಯ ನಿಜವಾದ ಗಂಡ ಹರೀಶ್ ಅಕ್ರಮ ಸಂಬಂಧವೇ ಕೊಲೆಗೆ ಕಾರಣವೆಂದು ತಿಳಿಯಲಾಗಿದೆ.
ಸದ್ಯ ಗಂಡ ಹರೀಶ್ ಹಾಗೂ ಪ್ರಿಯಕರನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.