ಸಾಮಾಜಿಕ

ಗಂಡನ ಕೊಲೆ ಮಾಡಿದರೆ ಬಹುಮಾನ ಕೊಡೋವುದಾಗಿ ಸ್ಟೇಟಸ್​ ಹಾಕಿದ ಪತ್ನಿ,.. ಪತಿರಾಯ ಶಾಕ್..!

Views: 86

ಆಗ್ರಾ: ನನ್ನ ಗಂಡನನ್ನು ಕೊಂದರೆ 50 ಸಾವಿರ ಬಹುಮಾನ ಎಂದು ಘೋಷಿಸುವ ಮೂಲಕ ವಾಟ್ಸ್​ಆ್ಯಪ್​ ಸ್ಟೇಟಸ್​ ಹಾಕಿಕೊಂಡಿದ್ದಾಳೆ. ಇದನ್ನು ಕಂಡ ಪತಿ ಶಾಕ್​ಗೆ ಒಳಗಾಗಿ ದೂರು ನೀಡಿದ್ದಾರೆ.

ಜುಲೈ 9, 2022ರಲ್ಲಿ ಭಿಂಡ್​ ಹಳ್ಳಿಯ ಹುಡುಗಿಯನ್ನು ವಿವಾದವಾದರು. ಮದುವೆ ಬಳಿಕ ಇಬ್ಬರ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಐದು ತಿಂಗಳ ಬಳಿಕ ಅಂದರೆ ಅದೇ ವರ್ಷ ಡಿಸೆಂಬರ್​ನಲ್ಲಿ ಪತ್ನಿ ತನ್ನ ತವರು ಮನೆ ಸೇರುತ್ತಾಳೆ.

ಬಳಿಕ ಒಂದು ವರ್ಷದ ಬಳಿಕ ಡಿಸೆಂಬರ್​ 21, 2023ರಲ್ಲಿ ಆಕೆ ಪತಿ ಮನೆಗೆ ಹಿಂತಿರುಗುತ್ತಾಳೆ. ನಂತರ ಪತ್ನಿಯ ತವರು ಮನೆಯವರು ಆತನಿಗೆ ಗಲಾಟೆ ಮಾಡಿದರೆ ಕೊಲೆ ಮಾಡುವುದಾಗಿ ಬೆದರಿಕೆಯನ್ನು ಹಾಕಿದ್ದಾರಂತೆ. ಇದನ್ನೇ ಇಟ್ಟುಕೊಂಡು ಈಗ ಪತ್ನಿ ವಾಟ್ಸ್​ಆ್ಯಪ್​ನಲ್ಲಿ ಸ್ಟೇಟಸ್​ ಹಾಕಿಕೊಂಡಿದ್ದಾಳೆ. ಪತಿಯನ್ನು ಕೊಂದವರಿಗೆ 50 ಸಾವಿರ ಎಂದು ಬರೆದುಕೊಂಡಿದ್ದಾಳೆ.

ಇದನ್ನು ಗಮನಿಸಿದ ಪತಿ ನೇರವಾಗಿ ಬಹ್​ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ದೂರಿನ ಅನ್ವಯ ಪತ್ನಿ ಮತ್ತು ಆತನ ಸ್ನೇಹಿತ ಮೇಲೆ ಆರೋಪ ಮಾಡಿದ್ದಾನೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related Articles

Back to top button