ಗಂಗೊಳ್ಳಿ: ವಿದ್ಯುತ್ ಚಾಲಿತ ಬ್ಲೇಡ್ ಹರಿತಗೊಳಿಸುವ ಸಾಣೆಕಲ್ಲು ತುಂಡಾಗಿ ವ್ಯಕ್ತಿ ಸಾವು

Views: 75
ಗಂಗೊಳ್ಳಿ: ವಿದ್ಯುತ್ ಚಾಲಿತ ಬ್ಲೇಡ್ ಹರಿತಗೊಳಿಸುವ ಸಾಣೆಕಲ್ಲು ತುಂಡಾಗಿ ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡು ಸಾವನ್ನಪ್ಪಿದ ಘಟನೆ ಗಂಗೊಳ್ಳಿಯಲ್ಲಿ ಸಂಭವಿಸಿದೆ.
ಗುಜ್ಜಾಡಿ ನಿವಾಸಿ ಸಂಜೀವ (67) ಮೃತಪಟ್ಟವರು.ಸಂಜೀವ ಅವರು ಮರಗೆಲಸ ಮಾಡಿಕೊಂಡಿದ್ದ ಸಂಜೀವ ಅವರು ಮಾ. 29ರಂದು ಅಪರಾಹ್ನ 2.15ರ ಸುಮಾರಿಗೆ ಗಂಗೊಳ್ಳಿಯ ಮ್ಯಾಂಗನೀಸ್ ವಾರ್ಫ್ ಬಳಿ ಸೋಮನಾಥ ಮೇಸ್ತ ಅವರ ಬೋಟ್ ಬಿಲ್ಡರ್‌ನಲ್ಲಿ ಬೋಟ್ ಬಿಲ್ಡಿಂಗ್ ಕೆಲಸ ಮಾಡುತ್ತಿದ್ದರು. ಸಾಣೆಕಲ್ಲಿಗೆ ಮರ ಕತ್ತರಿಸುವ ಬ್ಲೇಡನ್ನು ಕೊಡುತ್ತಿರುವಾಗ ಸಾಣೆಕಲ್ಲು ತುಂಡಾಗಿ ಎದೆಗೆ ಬಡಿಯಿತು. ತೀವ್ರ ಸ್ವರೂಪದ ಗಾಯಗಳಾಗಿದ್ದು ಕೂಡಲೇ ಅವರನ್ನು ಆ್ಯಂಬುಲೆನ್ಸ್‌ನಲ್ಲಿ ಕುಂದಾಪುರದ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರು.
ಮಹಾಗಣಪತಿ ಬೋಟ್ ಬಿಲ್ಡಿಂಗ್‌ನ ಮಾಲಕ ಸೋಮನಾಥ ಅವರ ನಿರ್ಲಕ್ಷ್ಯದಿಂದಾಗಿ ಅವಘಡ ಸಂಭವಿಸಿದೆ ಎಂದು ಸಂಜೀವ ಅವರ ಪುತ್ರ ಗುರುರಾಜ ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.