ಸಾಂಸ್ಕೃತಿಕ

ಕ್ಯಾನ್ಸರ್ ಗೆ ಬಲಿಯಾದ 28ನೇ ವಯಸ್ಸಿನ ಮಾಜಿ ಮಿಸ್‌ ಇಂಡಿಯಾ ತಾರೆ ರಿಂಕಿ ಚಕ್ಮಾ 

Views: 40

ಮಾಜಿ ಮಿಸ್‌ ಇಂಡಿಯಾ ತಾರೆ ರಿಂಕಿ ಚಕ್ಮಾ (28) ಅವರು ಕಳೆದ ಎರಡು ವರ್ಷಗಳಿಂದ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ಬಳಲುತ್ತಿದ್ದು, ಇದೀಗ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ.

ಶಸ್ತ್ರಚಿಕಿತ್ಸೆ ಬಳಿಕ ಚಿಕಿತ್ಸಾ ವಿಧಾನಗಳನ್ನು ಪಾಲಿಸುತ್ತಿದ್ದ ಚಕ್ಮಾ ಅವರು ಶೀಘ್ರ ಗುಣಮುಖವಾಗಿ ಮತ್ತೆ ಸಹಜ ಜೀವನಕ್ಕೆ ಮರಳುತ್ತೇನೆ ಅನ್ನೋ ಭರವಸೆಯಲ್ಲಿದ್ದರು. ಆದರೆ ಆಕೆ ಗುಣಮುಖಳಾಗುವುದಿಲ್ಲ ಎಂದು ತಿಳಿದ ನಂತರ ತನಗೆ ಸ್ತನ ಕ್ಯಾನ್ಸರ್‌ (ಫೈಲೋಡ್ಸ್ ಟ್ಯೂಮರ್) ಇರೋದನ್ನ ಬಹಿರಂಗಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಫೆಮಿನಾ ಮಿಸ್‌ ಇಂಡಿಯಾ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಅವರ ಸಾವಿಗೆ ಬಂಧುಮಿತ್ರರು ಸಂತಾಪ ಸೂಚಿಸಿದ್ದಾರೆ. ರಿಂಕಿ ಚಕ್ಮಾ ಅವರು 2017 ರಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ‘ಬ್ಯೂಟಿ ವಿತ್ ಎ ಪರ್ಪಸ್’ ಪ್ರಶಸ್ತಿಯನ್ನು ಗಳಿಸಿದ್ದರು. ಜೊತೆಗೆ ಮಾನುಷಿ ಚಿಲ್ಲರ್ ಪ್ರಶಸ್ತಿಯನ್ನು ಗೆದ್ದಿದ್ದರು.

 

Related Articles

Back to top button