ಶಿಕ್ಷಣ
ಕೋಟ ವಿವೇಕ ಆಂಗ್ಲ ಮಾಧ್ಯಮ ಪ್ರೌಢಶಾಲಾ ಮುಖ್ಯ ಶಿಕ್ಷಕಿಯಾಗಿ ಪ್ರೀತಿರೇಖಾ ಅಧಿಕಾರ ಸ್ವೀಕಾರ

Views: 190
ಉಡುಪಿ : ಗಣಿತ ಶಿಕ್ಷಕಿಯಾಗಿ 9 ವರ್ಷ ಹಾಗೂ ಮುಖ್ಯ ಶಿಕ್ಷಕಿಯಾಗಿ 14 ವರ್ಷಗಳ ಸೇವಾನುಭವವನ್ನು ಹೊಂದಿರುವ ಪ್ರೀತಿರೇಖಾ ವಿವೇಕ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕಿಯಾಗಿ ಇಂದು ಅಧಿಕಾರ ಸ್ವೀಕರಿಸಿದರು.
ಅಧ್ಯಾಪನದ ಅವಧಿಯಲ್ಲಿ ವಿದ್ಯಾರ್ಥಿಗಳ ಪ್ರೀತಿಯ ಶಿಕ್ಷಕಿಯಾಗಿ ಹೆಸರಾಂತ ಅತ್ಯುತ್ತಮ ಗಣಿತ ಶಿಕ್ಷಕಿ ಎಂದು ಹೆಸರು ಪಡೆದ ಪ್ರೀತಿರೇಖಾ 2011ರಲ್ಲಿ ಶಿಕ್ಷಣ ಇಲಾಖೆಯ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯಿಂದ ಪುರಸ್ಕತರಾಗಿದ್ದರು.
ಮುಖ್ಯ ಶಿಕ್ಷಕಿಯಾಗಿ ರಕ್ಷಕರ ಮತ್ತು ಸಹ ಶಿಕ್ಷಕರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದ ಇವರು ಎಲ್ಲರ ಪ್ರೀತಿ ಗೌರವಗಳಿಗೆ ಪಾತ್ರರಾಗಿದ್ದರು.
ಇವರ ಅಧಿಕಾರಾವಧಿಯಲ್ಲಿ ಸಂಸ್ಥೆ ಇನ್ನಷ್ಟು ಉನ್ನತಿಯನ್ನು ಸಾಧಿಸಲು ಸಾಧ್ಯವಾಗಲಿ ಎಂದು ಕೋಟ ವಿದ್ಯಾ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಆಡಳಿತ ಮಂಡಳಿಯ ಸದಸ್ಯರು ಹಾರೈಸಿದ್ದರು.