ಕೋಟ ವಿದ್ಯಾ ಸಂಸ್ಥೆ: ಮುಖ್ಯೋಪಾಧ್ಯಾಯ ಜಗದೀಶ ಹೊಳ್ಳರಿಗೆ ಬೀಳ್ಕೊಡುಗೆ ಸಮಾರಂಭ

Views: 99
ಕನ್ನಡ ಕರಾವಳಿ ಸುದ್ದಿ: ಕೋಟ ವಿದ್ಯಾಸಂಘ ಇದರ ಆಡಳಿತಕ್ಕೆ ಒಳಪಟ್ಟ ವಿವೇಕ ವಿದ್ಯಾ ಸಂಸ್ಥೆಗಳಲ್ಲಿ 17 ವರ್ಷಗಳ ಕಾಲ ಶಿಕ್ಷಕರಾಗಿ, ವಿವೇಕ ಬಾಲಕಿಯರ ಪ್ರೌಢಶಾಲೆಯಲ್ಲಿ 11ವರ್ಷ ಮುಖ್ಯೋಪಾಧ್ಯಾಯರಾಗಿ, ಒಟ್ಟು 28 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶ್ರೀ ಜಗದೀಶ ಹೊಳ್ಳ ಕೆ. ಇವರನ್ನು ಕೋಟ ವಿದ್ಯಾಸಂಘ ಮತ್ತು ವಿವೇಕ ಸಿಬ್ಬಂದಿ ವರ್ಗದ ಜಂಟಿ ಆಶ್ರಯದಲ್ಲಿ ಸನ್ಮಾನಿಸಿ ಭಾವಪೂರ್ಣ ವಿದಾಯವನ್ನು ಕೋರಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟ ವಿದ್ಯಾ ಸಂಘದ ಅಧ್ಯಕ್ಷರಾದ ಸಿ ಎ ಶ್ರೀ ಪ್ರಭಾಕರ ಮಯ್ಯ ವಹಿಸಿದ್ದರು. ಕಾರ್ಯದರ್ಶಿ ಎಂ ,ರಾಮದೇವ ಐತಾಳ್ ನಿವೃತ್ತರಿಗೆ ಶುಭ ಹಾರೈಸಿದರು. ಕೋಶಾಧಿಕಾರಿ ವೆಲೇರಿಯನ್ಮೇ ನೇಜಸ್ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜಗದೀಶ ನಾವಡರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು.
ಶಿಕ್ಷಕಿ ನಳೀನಾಕ್ಷಿ ಮೇಡಂ ಪ್ರಾರ್ಥಿಸಿದರು. ನಿವೃತ್ತರ ಕುರಿತಾಗಿ ಶ್ರೀ ವೆಂಕಟೇಶ ಉಡುಪ, ಶ್ರೀ ನರೇಂದ್ರ ಕುಮಾರ್ ಇವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ನಿವೃತ್ತಿ ಹೊಂದಿ ಸನ್ಮಾನ ಸ್ವೀಕರಿಸಿದ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಜಗದೀಶ ಹೊಳ್ಳ ತಮ್ಮ ವೃತ್ತಿ ಜೀವನದ ಅನುಭವವನ್ನು ಹಂಚಿಕೊಂಡರು. ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಸ್ಥರಾದ ಶ್ರೀಮತಿ ಪ್ರೀತಿ ರೇಖಾ ವಂದಿಸಿದರು. ಆಡಳಿತ ಮಂಡಳಿಯ ಸದಸ್ಯರು ,ವಿವೇಕ ವಿದ್ಯಾ ಸಂಸ್ಥೆಗಳ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಶಿಕ್ಷಕ ಶ್ರೀ ಪ್ರೇಮಾನಂದ ಕಾರ್ಯಕ್ರಮ ನಿರೂಪಿಸಿದರು.