ಧಾರ್ಮಿಕ
ಕೋಟ: ಬೇಳೂರಿನಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮದ ಬ್ಯಾನರ್ ಹರಿದ ಕಿಡಿಗೇಡಿಗಳು

Views: 188
ಕೋಟ: ಶ್ರೀರಾಮ ಮಂದಿರ ಲೋಕಾರ್ಪಣೆ ಸಂಬಂಧ ಅಳವಡಿಸಲಾದ ಬ್ಯಾನರನ್ನು ಕಿಡಿಗೇಡಿಗಳು ಹರಿದು ಹಾಕಿರುವ ಘಟನೆ ಜ.21ರಂದು ರಾತ್ರಿ ವೇಳೆ ಬೇಳೂರು ಗ್ರಾಮದ ಬಡಾಬೆಟ್ಟು ಸರಕಾರಿ ಶಾಲೆ ಬಳಿ ನಡೆದಿದೆ.
ರಾಘವೇಂದ್ರ, ಮಹೇಂದ್ರ, ಗಣೇಶ, ನಿತ್ಯಾನಂದ, ಸುರೇಂದ್ರ, ಮನೋಜ, ಶಿವಕುಮಾರ್ ಎಂಬವರ ಹೆಸರಿನಲ್ಲಿ ಹಾಕಲಾದ ಬ್ಯಾನರನ್ನು ದುಷ್ಕರ್ಮಿಗಳು ಗಣೇಶ, ನಿತ್ಯಾನಂದ, ಸುರೇಂದ್ರ, ಮನೋಜ, ಶಿವಕುಮಾರ್ ಮೇಲಿನ ದ್ವೇಷದಿಂದ ಅವರ ಹೆಸರುಗಳನ್ನು ಮಾತ್ರ ಬ್ಯಾನರ್ ನಲ್ಲಿ ಹರಿದು ಹಾಕಿರುವು ದಾಗಿ ದೂರಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.