ಕೋಟ: ನೇತ್ರ ತಪಾಸಣೆ, ಪೊರೆ ಶಸ್ತ್ರ ಚಿಕಿತ್ಸೆ ಶಿಬಿರ ಹಾಗೂ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಉಚಿತ ನೋಂದಣಿ

Views: 24
ಕೋಟ: ಕೋಟತಟ್ಟು ಗ್ರಾಮ ಪಂಚಾಯತ್,ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ, ಸಮುದಾಯ ಆರೋಗ್ಯ ಕೇಂದ್ರ ಕೋಟ, ಕ್ಷೇಮಆರೋಗ್ಯ ಕೇಂದ್ರ ಕೋಟ ತಟ್ಟು ಪಡುಕೆರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ( ಅಂದತ್ವ ನಿವಾರಣಾ ವಿಭಾಗ) ಉಡುಪಿ ಇವರ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣೆ ಮತ್ತು ಪೊರೆ ಶಸ್ತ್ರಚಿಕಿತ್ಸೆ ಶಿಬಿರ ಹಾಗೂ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಉಚಿತ ನೋಂದಣಿ ಶನಿವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟತಟ್ಟು ಪಡುಕೆರೆ ಇಲ್ಲಿ ನೆರವೇರಿತು .
ಸಭೆಯ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷ ಕೆ ಸತೀಶ್ ಕುಂದರ್ ಬಾರಿಕೆರೆ ವಹಿಸಿ ಮಾತನಾಡಿ ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜನರ ಆರೋಗ್ಯದ ಹಿತ ದೃಷ್ಟಿಯಿಂದ ಹಲವು ವೈದ್ಯಕೀಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದೆ ಹಾಗೂ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಉಚಿತ ನೋಂದಣಿ ಶಿಬಿರ ಇಂದು ಆಯೋಜನೆ ಮಾಡಲಾಗಿದ್ದು ಜನಸಾಮಾನ್ಯರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವ ಉತ್ಸಾಹವನ್ನು ಕೊಂಡಾಡಿದರು.
ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾಕ್ಟರ್ ಮಾಧವ್ ಪೈ,ಪ್ರಸಾದ್ ನೇತ್ರಾಲಯ ವೈದ್ಯೆ ಡಾ. ಅಂಬಿಕಾ, ಎನ್‌ಸಿಡಿ ವೈದ್ಯಾಧಿಕಾರಿ ಡಾ. ಯಶಸಶ್ರೀ ಶೆಟ್ಟಿ ,ಶಾಲಾ ಮುಖ್ಯೋಪಾಧ್ಯಯರಾದ ಜಾನಕಿ ಪಂಚಾಯತ್ ಸದಸ್ಯರಾದ ರವೀಂದ್ರ ತಿಂಗಾಳಾಯ , ರಾಬರ್ಟ್ ರೋಡ್ರಿಗಸ್, ಸಾಹಿರ ,ಅಶ್ವಿನಿ, ಪಿಆರ್‌ಓ ಮೋಹನ ದಾಸ್ ಉಪಸ್ಥಿತರಿದ್ದರು. ಪಂಚಾಯತ್ ಸದಸ್ಯ ವಾಸು ಪೂಜಾರಿ ಸ್ವಾಗತಿಸಿದರು. ಕಾರ್ಯದರ್ಶಿ ಸುಮತಿ ಅಂಚನ್ ವಂದಿಸಿದರು. ಶಾಲಾ ಶಿಕ್ಷಕರಾದ ಗಣೇಶ್ ಕಾರ್ಯಕ್ರಮವನ್ನು ನಿರೂಪಿಸಿದರು.
ಉಚಿತ ನೇತ್ರ ತಪಾಸಣೆ ಮತ್ತು ಪೊರೆ ಶಸ್ತç ಚಿಕಿತ್ಸೆ ಶಿಬಿರ ಹಾಗೂ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಉಚಿತ ನೋಂದಣಿ ಕಾರ್ಯಕ್ರಮಕ್ಕೆ ಪಂಚಾಯತ್ ಅಧ್ಯಕ್ಷ ಕೆ ಸತೀಶ್ ಕುಂದರ್ ಬಾರಿಕೆರೆ ಚಾಲನೆ ನೀಡಿದರು. ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾಕ್ಟರ್ ಮಾಧವ್ ಪೈ,ಪ್ರಸಾದ್ ನೇತ್ರಾಲಯ ವೈದ್ಯಾಧಿಕಾರಿ ಡಾಕ್ಟರ್ ಅಂಬಿಕಾ ಎನ್‌ಸಿಡಿ ವೈದ್ಯೆ ಡಾ. ಯಶಸಶ್ರೀ ಶೆಟ್ಟಿ ,ಶಾಲಾ ಮುಖ್ಯೋಪಾಧ್ಯಯರಾದ ಜಾನಕಿ ಮತ್ತಿತರರು ಇದ್ದರು.